Asianet Suvarna News Asianet Suvarna News

ರಣಜಿ ಟ್ರೋಫಿ: ಪಾಂಡೆ-ಕರುಣ್ ಭರ್ಜರಿ ಅರ್ಧಶತಕ: ಸೆಮೀಸ್’ಗೇರಿದ ಕರ್ನಾಟಕ

ಮೂರನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 45 ರನ್ ಬಾರಿಸಿದ್ದ ಕರ್ನಾಟಕ ಅಂತಿಮ ದಿನ ಪಂದ್ಯ ಗೆಲ್ಲಲು 139 ರನ್’ಗಳ ಅವಶ್ಯಕತೆಯಿತ್ತು. ನಾಲ್ಕನೇ ದಿನದಾಟ ಆರಂಭಿಸಿದ ಕರ್ನಾಟಕ ನೈಟ್ ವಾಚ್’ಮನ್ ರೋನಿತ್ ಮೋರೆ[8] ವಿಕೆಟ್ ಕಳೆದುಕೊಂಡಿತು. 

Ranji Trophy Manish Pandey Karun Nair Leads Karnataka to six wicket win enter Semifinal
Author
Bengaluru, First Published Jan 18, 2019, 2:19 PM IST

ಬೆಂಗಳೂರು[ಜ.18]: ಕರುಣ್ ನಾಯರ್[87*], ಮನೀಷ್ ಪಾಂಡೆ[61] ಅಜೇಯ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡವು ರಣಜಿ ಟ್ರೋಫಿ ಟೂರ್ನಿಯಲ್ಲಿ ರಾಜಸ್ಥಾನವನ್ನು 6 ವಿಕೆಟ್’ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ. ಮೊದಲ ಇನ್ನಿಂಗ್ಸ್’ನಲ್ಲಿ ಅಜೇಯ 83 ರನ್ ಸಿಡಿಸಿ ಕರ್ನಾಟಕ ತಂಡಕ್ಕೆ ಆಸರೆಯಾಗಿದ್ದ ಮಾಜಿ ನಾಯಕ ವಿನಯ್ ಕುಮಾರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಮೂರನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 45 ರನ್ ಬಾರಿಸಿದ್ದ ಕರ್ನಾಟಕ ಅಂತಿಮ ದಿನ ಪಂದ್ಯ ಗೆಲ್ಲಲು 139 ರನ್’ಗಳ ಅವಶ್ಯಕತೆಯಿತ್ತು. ನಾಲ್ಕನೇ ದಿನದಾಟ ಆರಂಭಿಸಿದ ಕರ್ನಾಟಕ ನೈಟ್ ವಾಚ್’ಮನ್ ರೋನಿತ್ ಮೋರೆ[8] ವಿಕೆಟ್ ಕಳೆದುಕೊಂಡಿತು. ಆ ಬಳಿಕ ಜತೆಯಾದ ಮನೀಶ್ ಪಾಂಡೆ-ಕರುಣ್ ನಾಯರ್ ಜೋಡಿ ಸೊಗಸಾದ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯನ್ನು ಬೇರ್ಪಡಿಸಲು ರಾಜಸ್ಥಾನ ನಾನಾ ಕಸರತ್ತು ನಡೆಸಿತಾದರೂ ಯಶಸ್ಸು ಕಾಣಲಿಲ್ಲ. ಮಹತ್ವದ ಪಂದ್ಯದಲ್ಲಿ ಜವಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಕರುಣ್ ನಾಯರ್ 129 ಎಸೆತಗಳಲ್ಲಿ 6 ಬೌಂಡರಿ ಸಹಿತ ಅಜೇಯ 61 ರನ್ ಬಾರಿಸಿದರು. ಇನ್ನು ಸ್ಫೋಟಕ ಬ್ಯಾಟಿಂಗ್ ನಡೆಸಿದ ನಾಯಕ ಮನೀಷ್ ಪಾಂಡೆ ಕೇವಲ 75 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 87 ರನ್ ಬಾರಿಸಿ ಅಜೇಯರಾಗುಳಿದರು. 

ಇದೀಗ ಉತ್ತರಪ್ರದೇಶ-ಸೌರಾಷ್ಟ್ರ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಹತೆಗಿಟ್ಟಿಸುವ ತಂಡವು ಜನವರಿ 24-28ರವರೆಗೆ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಎದುರಿಸಲಿದೆ. 
 

Follow Us:
Download App:
  • android
  • ios