ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಮುಕ್ತಾಯಗೊಂಡ ಎರಡೇ ದಿನಕ್ಕೆ ಭಾರತೀಯ ಕ್ರಿಕೆಟಿಗರು ಫುಟ್ಬಾಲ್ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿ ಕ್ರಿಕೆಟೇತರ ಆಟಗಾರರಿಗೂ ಸ್ಥಾನ ನೀಡಲಾಗಿದೆ.

ಮುಂಬೈ(ಅ.15): ವಿರಾಟ್ ಕೊಹ್ಲಿಯ ಆಲ್ ಹಾರ್ಟ್ ಎಫ್‌'ಸಿ ಹಾಗೂ ಬಾಲಿವುಡ್ ತಾರೆಯರ ಆಲ್ ಸ್ಟಾರ್ಸ್‌ ಎಫ್‌'ಸಿ ನಡುವಿನ ‘ಸೆಲೆಬ್ರಿಟಿ ಕ್ಲಾಸಿಕೋ’ ಸ್ನೇಹಾರ್ಥ ಫುಟ್ಬಾಲ್ ಪಂದ್ಯ ಇಂದು ಇಲ್ಲಿನ ಅಂಧೇರಿ ಕ್ರೀಡಾ ಸಮುಚ್ಚಯದಲ್ಲಿ ನಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಹ್ಲಿ ಫೌಂಡೇಶನ್ ಹಾಗೂ ಅಭಿಷೇಕ್ ಬಚ್ಚನ್ ಅವರ ದತ್ತಿ ಒಟ್ಟಾಗಿ ಈ ಪಂದ್ಯವನ್ನು ನಡೆಸಲಿದ್ದು, ಈ ಪಂದ್ಯದಿಂದ ಬರುವ ಹಣವನ್ನು ವಿವಿಧ ಕ್ಷೇಮಾಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ. ಕಳೆದ ವರ್ಷ ನಡೆದಿದ್ದ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿತ್ತು.

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಮುಕ್ತಾಯಗೊಂಡ ಎರಡೇ ದಿನಕ್ಕೆ ಭಾರತೀಯ ಕ್ರಿಕೆಟಿಗರು ಫುಟ್ಬಾಲ್ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿ ಕ್ರಿಕೆಟೇತರ ಆಟಗಾರರಿಗೂ ಸ್ಥಾನ ನೀಡಲಾಗಿದೆ. ಭಾರತ ಹಾಕಿ ತಂಡದ ಗೋಲ್ ಕೀಪರ್ ಶ್ರೀಜೇಶ್, ಟೆನಿಸಿಗ ರೋಹನ್ ಬೋಪಣ್ಣ, ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ತಂಡದಲ್ಲಿದ್ದಾರೆ.

ಪಂದ್ಯ ಆರಂಭ: ಸಂಜೆ 7 ಕ್ಕೆ.

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1