ಬ್ಯಾಟ್ಸ್'ಮನ್'ಗಳ ಸ್ವರ್ಗವಾಗಿರುವ ಐಪಿಎಲ್ ಟಿ20 ಟೂರ್ನಿಯಲ್ಲಿ ಸಾಕಷ್ಟು ಉತ್ತಮ ಜತೆಯಾಟದ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಅನೇಕ ಪಂದ್ಯಗಳಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಅಂತಹ ಜತೆಯಾಟದ ಮೂಲಕ ಐಪಿಎಲ್'ನಲ್ಲಿ ಗರಿಷ್ಟ ರನ್ ಕಲೆಹಾಕಿದ 4 ಕಿಲಾಡಿ ಜೋಡಿಗಳು ನಿಮ್ಮ ಮುಂದೆ...

ಟಿ20 ಕ್ರಿಕೆಟ್ ಒಂದು ರೀತಿಯ ರೋಚಕತೆ, ಅನಿರೀಕ್ಷತೆಯಿಂದ ಕೂಡಿದ ಯುವ ಜನತೆಯನ್ನು ಮನಸೂರೆಗೊಂಡ ಕ್ರಿಕೆಟ್ ಮಾದರಿ. ಇಲ್ಲಿ ಕೆಲವೇ ಎಸೆತಗಳು ಸಾಕು ಪಂದ್ಯದ ಫಲಿತಾಂಶವೇ ಬದಲಾಗಲು. ಚುಟುಕು ಮಾದರಿಯ ಕ್ರಿಕೆಟ್'ನಲ್ಲಿ ಏಕಾಂಗಿಯಾಗಿ ಬ್ಯಾಟ್ಸ್'ಮನ್'ವೊಬ್ಬ ಪಂದ್ಯವನ್ನು ಗೆಲ್ಲಿಸಿಕೊಟ್ಟ ಸಾಕಷ್ಟು ನಿದರ್ಶನಗಳಿವೆ. ಬ್ಯಾಟ್ಸ್'ಮನ್'ಗಳ ಸ್ವರ್ಗವಾಗಿರುವ ಐಪಿಎಲ್ ಟಿ20 ಟೂರ್ನಿಯಲ್ಲಿ ಸಾಕಷ್ಟು ಉತ್ತಮ ಜತೆಯಾಟದ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಅನೇಕ ಪಂದ್ಯಗಳಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಅಂತಹ ಜತೆಯಾಟದ ಮೂಲಕ ಐಪಿಎಲ್'ನಲ್ಲಿ ಗರಿಷ್ಟ ರನ್ ಕಲೆಹಾಕಿದ 4 ಕಿಲಾಡಿ ಜೋಡಿಗಳು ನಿಮ್ಮ ಮುಂದೆ...

1. ವಿರಾಟ್ ಕೊಹ್ಲಿ-ಕ್ರಿಸ್ ಗೇಲ್ : 2512 ರನ್

ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಜೋಡಿ ಯಾರು ಎಂದು ಕೇಳಿದರೆ ಕಣ್ಣುಮುಚ್ಚಿಕೊಂಡು ಹೇಳಬಹುದು ಕೊಹ್ಲಿ-ಗೇಲ್ ಜೋಡಿ ಎಂದು. ಐಪಿಎಲ್ ಇತಿಹಾಸದಲ್ಲಿ ಭರ್ಜರಿ ಮನರಂಜನೆ ನೀಡುತ್ತಾ ಬಂದಿರುವ ವಿರಾಟ್ ಕೊಹ್ಲಿ-ಕ್ರಿಸ್ ಗೇಲ್ ಜೋಡಿ 54 ಇನಿಂಗ್ಸ್'ನಲ್ಲಿ 52.33ರ ಸರಾಸರಿಯಂತೆ 2152 ರನ್ ಕಲೆಹಾಕಿ ಬೆಸ್ಟ್ ಪಾರ್ಟ್ನರ್'ಶಿಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಆರಂಭಿಕ ಜೋಡಿ ಕ್ರೀಸ್'ಗಿಳಿಯುತ್ತಿದ್ದಂತೆ ಎದರಾಳಿ ತಂಡದ ಬೌಲರ್'ಗಳ ಎದೆ ಬಡಿತ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ.

2. ವಿರಾಟ್ ಕೊಹ್ಲಿ- ಎಬಿ ಡಿವಿಲಿಯರ್ಸ್ : 2117 ರನ್

ಪ್ರಸ್ತತ ಕ್ರಿಕೆಟ್'ನ ಇಬ್ಬರು ಸೂಪರ್ ಹೀರೋಗಳು ಐಪಿಎಲ್ ಟಿ20 ಟೂರ್ನಿಯಲ್ಲಿ ಒಟ್ಟಿಗೆ ಬ್ಯಾಟಿಂಗ್ ಮಾಡಿದರೆ ಹೇಗಿರುತ್ತದೆ ಹೇಳಿ.. ಅಲ್ಲೇನಿದ್ದರು ಸಿಕ್ಸರ್ ಬೌಂಡರಿಗಳದ್ದೇ ಸದ್ದು. ಹೌದು ನಾನೀಗ ಹೇಳುತ್ತಿರುವುದು ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್ ಬಗ್ಗೆ. ಎದುರಾಳಿ ತಂಡದ ಬೌಲರ್'ಗಳನ್ನು ನಿರ್ದಾಕ್ಷಿಣ್ಯವಾಗಿ ದಂಡಿಸುವ ಎಬಿಡಿ-ಕೊಹ್ಲಿ ಜೋಡಿ ಕಳೆದ ಐಪಿಎಲ್ ಅವತರಣಿಕೆಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ 229 ರನ್'ಗಳ ಜತೆಯಾಟವಾಡುವ ಮೂಲಕ ಟಿ20 ಕ್ರಿಕೆಟ್'ನಲ್ಲಿ ಗರಿಷ್ಟ ರನ್ ಜತೆಯಾಟವಾಡಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಎದುರಾಳಿ ಬೌಲಿಂಗ್ ಪಡೆಯ ದಾಳಿಯನ್ನು ದ್ವಂಸ ಮಾಡುವ ಅವರ ಬ್ಯಾಟಿಂಗ್ ಶೈಲಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ.

3. ಶಿಖರ್ ಧವನ್- ಡೇವಿಡ್ ವಾರ್ನರ್ : 1711 ರನ್

ಸನ್'ರೈಸರ್ಸ್ ಹೈದರಾಬಾದ್ ತಂಡದ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎಂದು ಗುರುತಿಸಿಕೊಂಡಿರುವ ಧವನ್-ವಾರ್ನರ್ ಜೋಡಿ 48.88ರ ಸರಾಸರಿಯಲ್ಲಿ ರನ್ ಕಲೆಹಾಕಿದೆ. 2014ರಿಂದ ಜತೆಯಾದ ಈ ಜೋಡಿ ಕೆಲವು ಭರ್ಜರಿ ಪಾರ್ಟರ್'ಶಿಪ್ ಮೂಲಕ ಹೈದರಾಬಾದ್ ತಂಡಕ್ಕೆ ಗೆಲುವು ದೊರಕಿಸಿಕೊಟ್ಟಿದ್ದಾರೆ. ಒಂದೆಡೆ ವಾರ್ನರ್ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದರೆ, ಇನ್ನೊಂದು ತುದಿಯಲ್ಲಿ ಧವನ್ ಆಸೀಸ್ ಆಟಗಾರನಿಗೆ ತಕ್ಕ ಸಾಥ್ ನೀಡುವುದರ ಜೊತೆಗೆ ತಂಡದ ರನ್ ಗಳಿಕೆಗೂ ಒತ್ತು ನೀಡುತ್ತಾ ಬಂದಿದ್ದಾರೆ. ಹೀಗಾಗಿಯೇ ಕಳೆದ ಐಪಿಎಲ್ ಋತುವಿನಲ್ಲಿ ಇಬ್ಬರು ಆಟಗಾರರು ತಲಾ 500 ರನ್ ಕಲೆಹಾಕಿದ್ದು ಮಾತ್ರವಲ್ಲದೇ ಟ್ರೋಫಿ ಎತ್ತಿಹಿಡಿಯುವಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

4. ಗೌತಮ್ ಗಂಭೀರ್-ರಾಬಿನ್ ಉತ್ತಪ್ಪ : 1478 ರನ್

ಕೊಲ್ಕತಾ ನೈಟ್ ರೈಡರ್ಸ್ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎಂದರೆ ಅದು ಗೌತಮ್ ಗಂಭೀರ್-ರಾಬಿನ್ ಉತ್ತಪ್ಪ ಜೋಡಿ. ಇಂಡಿಯಾ ಎ ಸೇರಿದಂತೆ ವಿವಿಧ ವಯೋಮಾನದ ಟೂರ್ನಿಗಳಲ್ಲಿ ಆರಂಭಿಕ ಜೋಡಿಯಾಗಿ ಕಣಕ್ಕಿಳಿದಿದ್ದರೂ 2014ರ ನಂತರ ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಸ್ಮರಣೀಯ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಕೀರ್ತಿ ಉತ್ತಪ್ಪ-ಗಂಭೀರ್ ಜೋಡಿಗೆ ಸಲ್ಲುತ್ತದೆ. ಕೇವಲ 39 ಇನಿಂಗ್ಸ್'ನಲ್ಲಿ ಈ ಜೋಡಿ 1478 ರನ್ ಕಲೆಹಾಕಿದ್ದು, ಮುಂಬರುವ ಆವೃತ್ತಿಯಲ್ಲೂ ಈ ಜೋಡಿ ಭರ್ಜರಿ ರನ್ ಬೇಟೆಯಾಡುವ ತವಕದಲ್ಲಿದೆ.