ಬಾಲ್ ಟ್ಯಾಂಪರಿಂಗ್ - ಇಂಗ್ಲೆಂಡ್ ಕಹಿ ಸತ್ಯ ಬಹಿರಂಗ!

ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧಕ್ಕೊಳಗಾದ ಮೇಲೆ ಕ್ರಿಕೆಟಿಗರು ಹೆಚ್ಚು ಜಾಗರೂಕರಾಗಿದ್ದಾರೆ. ಈ ಪ್ರಕರಣದ ಬಳಿಕ ಚೆಂಡು ವಿರೂಪಗೊಳಿದ ಆರೋಪ ಕೇಳಿ ಬಂದಿಲ್ಲ. ಇದೀಗ ಇಂಗ್ಲೆಂಡ್ ತಂಡದ ಬಾಲ್ ಟ್ಯಾಂಪರಿಂಗ್ ಸ್ಫೋಟಕ ಸತ್ಯ ಬಹಿರಂಗಗೊಂಡಿದೆ.

Monty panesar reveals england ball tampering in the full monty autobiography

ಲಂಡನ್‌(ಮೇ.26): ಇಂಗ್ಲೆಂಡ್‌ ಬೌಲರ್‌ಗಳು ಚೆಂಡು ವಿರೂಪಗೊಳಿಸಲು ಲೋಷನ್‌, ಮಿಂಟ್‌ ಎಂಜಲು ಹಾಗೂ ಪ್ಯಾಂಟ್‌ನ ಜಿಪ್‌ಗಳನ್ನು ಬಳಸುತ್ತಿದ್ದರು ಎಂದು ಮಾಜಿ ಸ್ಪಿನ್ನರ್‌ ಮಾಂಟಿ ಪನೇಸರ್‌ ತಮ್ಮ ಆತ್ಮಕಥೆ ‘ದ ಫುಲ್‌ ಮಾಂಟಿ’ಯಲ್ಲಿ ಬರೆದಿದ್ದಾರೆ. ಚೆಂಡು ರಿವರ್ಸ್‌ ಸ್ವಿಂಗ್‌ ಆಗುವಂತೆ ಮಾಡಲು ಇಂಗ್ಲೆಂಡ್‌ ಆಟಗಾರರು ಸಹ ಚೆಂಡು ವಿರೂಪಗೊಳಿಸುವ ಯತ್ನ ನಡೆಸುತ್ತಿದ್ದರು ಎನ್ನುವ ಸ್ಫೋಟಕ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಫಿಕ್ಸಿಂಗ್‌ ಶಂಕೆಯಿಂದ ಭಾರತದ 2 ಪತ್ರಕರ್ತರಿಗೆ ನಿಷೇಧ!

‘ನಾನು ಇಂಗ್ಲೆಂಡ್‌ ತಂಡಕ್ಕೆ ಕಾಲಿಟ್ಟಾಗ ವೇಗದ ಬೌಲರ್‌ಗಳಿಗೆ ನೆರವಾಗುವಂತೆ ಚೆಂಡು ಸಿದ್ಧಪಡಿಸುವುದು ನನ್ನ ಕೆಲಸವಾಗಿತ್ತು. ಜೇಮ್ಸ್‌ ಆ್ಯಂಡರ್‌ಸನ್‌ ಸೇರಿ ಎಲ್ಲಾ ವೇಗಿಗಳು ಚೆಂಡು ಆದಷ್ಟುಒಣಗಿರುವಂತೆ ನೋಡಿಕೊಳ್ಳಲು ಹೇಳುತ್ತಿದ್ದರು. ಮಿಂಟ್‌ ಅಗಿಯುತ್ತಾ ಅದರ ಎಂಜಲು, ಸನ್‌ ಲೋಷನ್‌, ಚೆಂಡು ರಿವರ್ಸ್‌ ಸ್ವಿಂಗ್‌ ಆಗುವಂತೆ ಮಾಡುತ್ತವೆ ಎನ್ನುವುದನ್ನು ನಾವು ಕಂಡುಕೊಂಡಿದ್ದೆವು. 

ಇದನ್ನೂ ಓದಿ: ಕೊಹ್ಲಿ ಹಾಗೂ ಧೋನಿಗೆ ನಟಿ ಉರ್ವಶಿ ರೌಟೆಲಾ ಟ್ವೀಟ್

ಕೆಲವೊಮ್ಮೆ ಪ್ಯಾಂಟ್‌ನ ಜಿಪ್ ಮೇಲೆ ಚೆಂಡನ್ನು ಉಜ್ಜಿ, ಚೆಂಡನ್ನು ಅಗತ್ಯಕ್ಕೆ ತಕ್ಕಂತೆ ವಿರೂಪಗೊಳಿಸಿದ ಉದಾಹರಣೆಯೂ ಇದೆ. ಒಂದು ರೀತಿಯಲ್ಲಿ ಕ್ರೀಡಾ ಸ್ಫೂರ್ತಿಗೆ ಧಕ್ಕೆ ಉಂಟು ಮಾಡಿದೆವು ಎಂದರೂ ತಪ್ಪಿಲ್ಲ’ ಎಂದು ಪನೇಸರ್‌ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
 

Latest Videos
Follow Us:
Download App:
  • android
  • ios