ಶಮಿ ನೋಡಬೇಕು ಎಂದ ಪತ್ನಿ ಹಸೀನ್ ಜಹಾನ್

First Published 27, Mar 2018, 11:25 AM IST
Mohammed Shamis estranged wife wants to meet Injured cricketer
Highlights

ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾ ವೇಗಿ ಮೊಹಮದ್ ಶಮಿರನ್ನು ಭೇಟಿ ಮಾಡಬೇಕೆಂದು ಅವರ ಪತ್ನಿ ಹಸೀನ್ ಜಹಾನ್ ತಿಳಿಸಿದ್ದಾರೆ.

ನವದೆಹಲಿ: ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾ ವೇಗಿ ಮೊಹಮದ್ ಶಮಿರನ್ನು ಭೇಟಿ ಮಾಡಬೇಕೆಂದು ಅವರ ಪತ್ನಿ ಹಸೀನ್ ಜಹಾನ್ ತಿಳಿಸಿದ್ದಾರೆ.

‘ನನ್ನ ಹೋರಾಟವೇನಿದ್ದರೂ ಅವರು ನನಗೆ ಎಸಗಿದ ಅನ್ಯಾಯದ ವಿರುದ್ಧ. ಅವರು ನನ್ನನ್ನು ಪತ್ನಿಯನ್ನಾಗಿ ಸ್ವೀಕರಿಸಲು ಸಿದ್ಧರಿಲ್ಲದೇ ಇರಬಹುದು.

ಆದರೆ, ಅವರ ಮೇಲಿನ ನನ್ನ ಪ್ರೀತಿ ಎಂದಿಗೂ ಕಡಿಮೆ ಆಗುವುದಿಲ್ಲ. ಅವರು ಬೇಗನೆ ಗುಣಮುಖರಾಗಲೆಂದು ದೇವರಲ್ಲಿ ಬೇಡುತ್ತೇನೆ’ ಎಂದರು.

loader