ಪತ್ನಿಯ ದೂರಿನಿಂದ ಹೈರಾಣಾಗಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬದುಕು ಇನ್ನು ಹಸನಾಗಿಲ್ಲ. ಆದರೆ ಶಮಿ ಇತರರ ಬಾಳಿನಲ್ಲಿ ಬೆಳಕಾಗಿದ್ದಾರೆ. ಅಷ್ಟಕ್ಕೂ ಶಮಿ ಮಾಡಿದ ಸಾಮಾಜಿಕ ಕಾರ್ಯವೇನು? ಇಲ್ಲಿದೆ ನೋಡಿ.
ಉತ್ತರ ಪ್ರದೇಶ(ಜು.21): ಪತ್ನಿಯ ದೂರು, ಪೊಲೀಸ್ ಠಾಣೆ, ಕೋರ್ಟ್, ಇಂಜುರಿ ಸಮಸ್ಯೆ ಸೇರಿದಂತೆ ಹಲವು ಅಡೆ ತಡೆ ಎದುರಿಸಿದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗೋ ಮೂಲಕ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ.
ಪತ್ನಿ ಜೊತೆಗಿನ ಕಾನೂನು ಹೋರಾಟ ಇನ್ನು ಅಂತ್ಯಗೊಂಡಿಲ್ಲ. ಹೀಗಾಗಿ ಸ್ವತಃ ಮೊಹಮ್ಮದ್ ಶಮಿ ವೈಯುಕ್ತಿ ಬದುಕು ಇನ್ನು ಕತ್ತಲೆಯಲ್ಲಿದೆ. ಆದರೆ ಶಮಿ ತಮ್ಮ ಹುಟ್ಟೂರಾದ ಅಮೋರಾಹದ ವಿಕಲಚೇತನರ ಬಾಳಲ್ಲಿ ಬೆಳಕಾಗಿದ್ದಾರೆ.
ಇದನ್ನು ಓದಿ:ಬಿಸಿಸಿಐ ವಿರುದ್ಧ ಮೊಹಮ್ಮದ್ ಶಮಿ ಪತ್ನಿ ಗರಂ ಆಗಿದ್ದೇಕೆ?
ವಿಕಲಚೇತನರಿಗೆ ಮೂರು ಚಕ್ರದ ಸೈಕಲ್ ವಿತರಿಸಿದ್ದಾರೆ. ತಮ್ಮ ಸಾಮಾಜಿಕ ಕಾರ್ಯವನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಶಮಿ ತಮ್ಮ ಮಾನಸಿಕ ತೊಳಲಾಟದಿಂದ ಹೊರಬರೋ ಪ್ರಯತ್ನ ಮಾಡಿದ್ದಾರೆ.
ಇದನ್ನು ಓದಿ: ಶಮಿ ಟೆಸ್ಟ್ ಆಯ್ಕೆ ಬೆನ್ನಲ್ಲೇ ಕೋಲ್ಕತ್ತಾ ಪೊಲೀಸರಿಂದ ನೊಟಿಸ್
