ಪತ್ನಿ ಜತೆಗಿನ ಸಂಬಂಧ ಮುಗಿದ ಅಧ್ಯಾಯ: ಶಮಿ

First Published 17, Mar 2018, 3:02 PM IST
Mohammed Shami demands investigation says relationship with wife Hasin Jahan over
Highlights

ಪತ್ನಿ ಮಾಡಿರುವ ಆರೋಪಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಸತ್ಯ ಹೊರ ಬರಬೇಕು ಎಂದು ಶಮಿ ಆಗ್ರಹಿಸಿದ್ದಾರೆ. ‘ನನ್ನ ಕುಟುಂಬದವರೆಲ್ಲಾ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥ ಮಾಡಲು ಪ್ರಯತ್ನಿಸಿದರು. ಆದರೆ ಹಸೀನ್ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾಳೆ. ತನಿಖೆ ಸರಿಯಾಗಿ ನಡೆದರೆ, ಆಕೆಯ ಆರೋಪಗಳೆಲ್ಲಾ ಸುಳ್ಳು ಎನ್ನುವುದು ಬಯಲಾಗಲಿದೆ’ ಎಂದಿದ್ದಾರೆ.

ನವದೆಹಲಿ(ಮಾ.17): ಕಿರುಕುಳ, ಕೊಲೆ ಯತ್ನ ಆರೋಪ ಎದುರಿಸುತ್ತಿರುವ ಭಾರತ ತಂಡದ ವೇಗಿ ಮೊಹಮದ್ ಶಮಿ, ತಮ್ಮ ಹಾಗೂ ಪತ್ನಿ ಹಸೀನ್ ಜಹಾನ್‌ರ ಸಂಬಂಧ ಮುಗಿದ ಅಧ್ಯಾಯ ಎಂದಿದ್ದಾರೆ.

ಪತ್ನಿ ಮಾಡಿರುವ ಆರೋಪಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಸತ್ಯ ಹೊರ ಬರಬೇಕು ಎಂದು ಶಮಿ ಆಗ್ರಹಿಸಿದ್ದಾರೆ. ‘ನನ್ನ ಕುಟುಂಬದವರೆಲ್ಲಾ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥ ಮಾಡಲು ಪ್ರಯತ್ನಿಸಿದರು. ಆದರೆ ಹಸೀನ್ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾಳೆ. ತನಿಖೆ ಸರಿಯಾಗಿ ನಡೆದರೆ, ಆಕೆಯ ಆರೋಪಗಳೆಲ್ಲಾ ಸುಳ್ಳು ಎನ್ನುವುದು ಬಯಲಾಗಲಿದೆ’ ಎಂದಿದ್ದಾರೆ.

‘ಡಿ.7ರಂದು ಭುವನೇಶ್ವರ್ ಮದುವೆಗೆ ಒಟ್ಟಿಗೆ ಹೋಗಿದ್ದೇವೆ. ಆಕೆಗೆ ₹18 ಲಕ್ಷ ಮೌಲ್ಯದ ಒಡವೆ ತೆಗೆದುಕೊಟ್ಟ ರಸೀದಿ ನನ್ನ ಬಳಿ ಇದೆ. ಮಳಿಗೆಯ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಲಿ. ನನ್ನ ಅಣ್ಣನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾಳೆ. ಅದು ಸಹ ಸುಳ್ಳು ಎಂದು ಸಾಬೀತು ಪಡಿಸಲು ನನ್ನ ಬಳಿ ಸಾಕ್ಷ್ಯವಿದೆ’ ಎಂದು ಶಮಿ ಹೇಳಿದ್ದಾರೆ. ಇದೇ ವೇಳೆ ಐಪಿಎಲ್ 11ನೇ ಆವೃತ್ತಿಯಲ್ಲಿ ಶಮಿ ಪಾಲ್ಗೊಳ್ಳುವಿಕೆ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕ ನಿರ್ಧರಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

loader