ಟಿ20 ತ್ರಿಕೋನ ಸರಣಿ: ಆಸೀಸ್ ಮಣಿಸಿದ ಪಾಕ್ ಚಾಂಪಿಯನ್

Pakistan win the Tri Series
Highlights

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಡಾರ್ಶಿ ಶಾರ್ಟ್[76] ಹಾಗೂ ನಾಯಕ ಆ್ಯರೋನ್ ಫಿಂಚ್[47] ಆಕರ್ಷಕ ಬ್ಯಾಟಿಂಗ್ ನೆರವಿನಿಂದ 183 ರನ್’ಗಳ ಸವಾಲಿನ ಮೊತ್ತ ಕಲೆಹಾಕಿತ್ತು.

ಹರಾರೆ[ಜು.08]: ಫಖರ್ ಜಮಾನ್ ಶತಕ ವಂಚಿತ ಬ್ಯಾಟಿಂಗ್[91], ಅನುಭವಿ ಬ್ಯಾಟ್ಸ್’ಮನ್ ಶೋಯೆಬ್ ಮಲ್ಲಿಕ್(43*) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ತ್ರಿಕೋನ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ 6 ವಿಕೆಟ್’ಗಳ ಭರ್ಜರಿ ಜಯ ದಾಖಲಿಸುವುದರೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಡಾರ್ಶಿ ಶಾರ್ಟ್[76] ಹಾಗೂ ನಾಯಕ ಆ್ಯರೋನ್ ಫಿಂಚ್[47] ಆಕರ್ಷಕ ಬ್ಯಾಟಿಂಗ್ ನೆರವಿನಿಂದ 183 ರನ್’ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಆಸೀಸ್ ನೀಡಿದ್ದ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ ಮೊದಲ ಓವರ್’ನಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮೊದಲ ಓವರ್ ಬೌಲಿಂಗ್ ಮಾಡಿದ ಗ್ಲೇನ್ ಮ್ಯಾಕ್ಸ್’ವೆಲ್ ಪಾಕ್ ಆರಂಭಿಕ ಬ್ಯಾಟ್ಸ್’ಮನ್ ಸಾಹೀಬ್’ಜಾದ ಫರ್ಹಾನ್ ಹಾಗೂ ಹುಸೈನ್ ತಲಾತ್ ಅವರನ್ನು ಪೆವಿಲಿಯನ್’ಗೆ ಅಟ್ಟಿದರು.

ಆ ಬಳಿಕ ಮೂರನೇ ವಿಕೆಟ್’ಗೆ ಜತೆಯಾದ ಫಖರ್ ಜಮಾನ್ ಹಾಗೂ ನಾಯಕ ಸರ್ಫರಾಜ್ ಅಹಮ್ಮದ್ 45 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 5ನೇ ವಿಕೆಟ್’ಗೆ ಜಮಾನ್ ಹಾಗೂ ಮಲ್ಲಿಕ್ ಜೋಡಿ 109 ರನ್’ಗಳ ಜತೆಯಾಟವಾಡಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕೊಂಡ್ಯೊಯ್ದರು. ಈ ವೇಳೆ ಶತಕದತ್ತ ಮುನ್ನುಗ್ಗುತ್ತಿದ್ದ ಫಖರ್ ಜಮಾನ್ 91 ರನ್ ಬಾರಿಸಿ ರಿಚರ್ಡ್’ಸನ್’ಗೆ ವಿಕೆಟ್ ಒಪ್ಪಿಸಿದರು. ಆಸೀಫ್ ಅಲಿ-ಮಲ್ಲಿಕ್ ಜೋಡಿ ಇನ್ನೂ 4 ಎಸೆತಗಳು ಬಾಕಿಯಿರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

1990ರ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಓವರ್’ನಲ್ಲಿ ಗೆಲುವಿನ ನಗೆ ಬೀರಿದ ಸಾಧನೆ ಮಾಡಿದೆ. ಫಖರ್ ಜಮಾನ್ ಪಂದ್ಯಶ್ರೇಷ್ಠ ಹಾಗೆಯೇ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ: 183/8

ಡಾರ್ಶಿ ಶಾರ್ಟ್: 76
ಅಮೀರ್: 33/3

ಪಾಕಿಸ್ತಾನ: 187/4

ಫಖರ್ ಜಮಾನ್: 91
ಮ್ಯಾಕ್ಸ್’ವೆಲ್: 35/2
 

loader