ಮಿಥಾಲಿ ಭಾರತದ ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರು ಎಂದು ಬ್ರಿಟನ್ ಪ್ರಸಾರ ನಿಗಮ(ಬಿಬಿಸಿ) ತಿಳಿಸಿದೆ.

ಮುಂಬೈ(ಸೆ.28): ಭಾರತ ವನಿತೆಯರ ತಂಡವನ್ನು ವಿಶ್ವಕಪ್ ಫೈನಲ್’ಗೇರಿಸಿದ ಬಳಿಕ ನಾಯಕಿ ಮಿಥಾಲಿ ರಾಜ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಿಥಾಲಿ ದಿನಕ್ಕೊಂದು ಹೊಸ ವಿಷಯದೊಂದಿಗೆ ಸುದ್ದಿಯಾಗುತ್ತಿದ್ದಾರೆ. ಮಂಗಳವಾರವಷ್ಟೇ ಪ್ರತಿಷ್ಠಿತ ಫ್ಯಾಷನ್ ನಿಯತಕಾಲಿಕೆ ‘ವೋಗ್’ ಮುಖಪುಟದಲ್ಲಿ ಮಿಥಾಲಿ ಮಿಂಚಿದ್ದರು. ಇದೀಗ ಬಿಬಿಸಿಯ 2017ನೇ ಸಾಲಿನ 100 ಪ್ರಭಾವಿಶಾಲಿ ಮಹಿಳೆಯರ ಪಟ್ಟಿಯಲ್ಲೂ ಮಿಥಾಲಿ ಸ್ಥಾನ ಗಿಟ್ಟಿಕೊಂಡಿದ್ದಾರೆ.

ಮಿಥಾಲಿ ಭಾರತದ ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರು ಎಂದು ಬ್ರಿಟನ್ ಪ್ರಸಾರ ನಿಗಮ(ಬಿಬಿಸಿ) ತಿಳಿಸಿದೆ.