ಏಷ್ಯಾಡ್’ನಿಂದ ಹೊರಬಿದ್ದ ವೇಟ್’ಲಿಫ್ಟರ್ ಚಾನು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 4:54 PM IST
Mirabai Chanu Pulls Out of Asian Games
Highlights

23 ವರ್ಷದ ಮೀರಾಬಾಯಿ ಆಸ್ಟ್ರೇಲಿಯಾದ ಗೋಲ್ಡ್’ಕೋಸ್ಟ್’ನಲ್ಲಿ ನಡೆದ ಕಾಮನ್’ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದರು.

ನವದೆಹಲಿ[ಆ.08]: ವಿಶ್ವ ಚಾಂಪಿಯನ್ ವೇಟ್‌ಲಿಫ್ಟರ್ ಭಾರತದ ಮೀರಾಬಾಯಿ ಚಾನು, ಇದೇ ತಿಂಗಳು 18ರಿಂದ ಇಂಡೋನೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. 

ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಅವರನ್ನು ಏಷ್ಯಾಡ್‌ನಲ್ಲಿ ಕಣಕ್ಕಿಳಿಸದರಿಲು ಪ್ರಧಾನ ಕೋಚ್ ವಿಜಯ್ ಶರ್ಮಾ ನಿರ್ಧರಿಸಿದ್ದಾರೆ. ಸದ್ಯದಲ್ಲೇ ಒಲಿಂಪಿಕ್ಸ್ ಅರ್ಹತಾ ಟೂರ್ನಿ ಇದ್ದು, ಈ ಕಾರಣದಿಂದಾಗಿ ಪೂರ್ಣ ಫಿಟ್ನೆಸ್ ಸಾಧಿಸುವವರೆಗೂ ಸ್ಪರ್ಧೆಯಿಂದ ದೂರವಿರುವಂತೆ ಮೀರಾಬಾಯಿಗೆ ಸೂಚಿಸಲಾಗಿದೆ.

ಇದನ್ನು ಓದಿ: ಕಾಮನ್'ವೆಲ್ತ್ ಗೇಮ್ಸ್: ಚಿನ್ನಕ್ಕೆ ಮುತ್ತಿಕ್ಕಿದ ಮಣಿಪುರದ ಮೀರಾ

23 ವರ್ಷದ ಮೀರಾಬಾಯಿ ಆಸ್ಟ್ರೇಲಿಯಾದ ಗೋಲ್ಡ್’ಕೋಸ್ಟ್’ನಲ್ಲಿ ನಡೆದ ಕಾಮನ್’ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದರು.
 

loader