48 ಕೆ.ಜಿ ವಿಭಾಗದಲ್ಲಿ ಒಟ್ಟು 196 ಕೆ,.ಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ಗೆಲ್ಲುವಲ್ಲಿ ಮಣಿಪುರದ ಚಾನು ಯಶಸ್ವಿಯಾಗಿದ್ದಾರೆ. ಸ್ನ್ಯಾಚ್ ವಿಭಾಗದಲ್ಲಿ ತಮ್ಮದೇ ಹಳೆದ ದಾಖಲೆ(85 ಕೆಜಿ) ಉತ್ತಮ ಪಡಿಸಿಕೊಂಡ ಚಾನು ಇಂದು 86 ಕೆ.ಜಿ ಬಾರ ಎತ್ತುವಲ್ಲಿ ಯಶಸ್ವಿಯಾದರು. ಇನ್ನು ಜೆರ್ಕ್ ವಿಭಾಗದಲ್ಲೂ 110 ಕೆ.ಜಿ ಭಾರವನ್ನು ಅನಾಯಾಸವಾಗಿ ಎತ್ತಿ ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾದರು.

ಗೋಲ್ಡ್ ಕೋಸ್ಟ್(ಏ.05): ವೇಯ್ಟ್'ಲಿಪ್ಟರ್ ಮೀರಾಬಾಯಿ ಚಾನು ಗೋಲ್ಡ್ ಕೋಸ್ಟ್'ನಲ್ಲಿ ಆರಂಭವಾಗಿರುವ ಕಾಮನ್'ವೆಲ್ತ್ ಗೇಮ್ಸ್'ನಲ್ಲಿ ಚಿನ್ನದ ಪದಕ ಬೇಟೆಯಾಡಿದ್ದಾರೆ.

48 ಕೆ.ಜಿ ವಿಭಾಗದಲ್ಲಿ ಒಟ್ಟು 196 ಕೆ,.ಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ಗೆಲ್ಲುವಲ್ಲಿ ಮಣಿಪುರದ ಚಾನು ಯಶಸ್ವಿಯಾಗಿದ್ದಾರೆ. ಸ್ನ್ಯಾಚ್ ವಿಭಾಗದಲ್ಲಿ ತಮ್ಮದೇ ಹಳೆದ ದಾಖಲೆ(85 ಕೆಜಿ) ಉತ್ತಮ ಪಡಿಸಿಕೊಂಡ ಚಾನು ಇಂದು 86 ಕೆ.ಜಿ ಬಾರ ಎತ್ತುವಲ್ಲಿ ಯಶಸ್ವಿಯಾದರು. ಇನ್ನು ಜೆರ್ಕ್ ವಿಭಾಗದಲ್ಲೂ 110 ಕೆ.ಜಿ ಭಾರವನ್ನು ಅನಾಯಾಸವಾಗಿ ಎತ್ತಿ ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾದರು.

Scroll to load tweet…

ಇದೇ ವಿಭಾಗದಲ್ಲಿ ಮಾರಿಷಸ್'ನ ಮೇರಿ ಹಂತಿರಾ ರನೈವೋಸಾ(170) ಬೆಳ್ಳಿ ಹಾಗೂ ಶ್ರೀಲಂಕಾದ ದಿನುಶಾ ಗೋಮ್ಸ್(155 ಕೆಜಿ) ಕಂಚು ಗೆದ್ದುಕೊಂಡರು.

ಮೀರಾಬಾಯಿ ಚಾನು ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದಕ್ಕೂ ಮೊದಲು ಕನ್ನಡಿಗ ಗುರುರಾಜ್ ಪೂಜಾರಿ 56 ಕೆ.ಜಿ ವೇಯ್ಟ್'ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶಕ್ಕೆ ಪದಕದ ಖಾತೆ ಆರಂಭಿಸಿದ್ದರು.