ಕೃನಾಲ್, ಸೂರ್ಯಕಾಂತ್ ಆರ್ಭಟ: ಮುಂಬೈ ಪ್ಲೇಆಫ್ ಆಸೆ ಜೀವಂತ

MI Won by 6 Wickets vs Punjab
Highlights

ಪಂಜಾಬ್ ನೀಡಿದ್ದ 175 ರನ್ ಸವಾಲನ್ನು 19 ಓವರ್'ಗಳಲ್ಲಿ ಸಂಪೂರ್ಣಗೊಳಿಸಿದರು. ಸೂರ್ಯಕಾಂತ್ ಯಾದವ್ (57, 3 ಸಿಕ್ಸ್, 6 ಬೌಂಡರಿ), ಕೃನಾಲ್ ಪಾಂಡ್ಯ(31, 2 ಸಿಕ್ಸ್, 4 ಬೌಂಡರಿ) ಇಶಾನ್(25, 3 ಸಿಕ್ಸ್) ಅದ್ಭುತ ಆಟವಾಡಿ ಗೆಲುವಿನ ಮುನ್ನಡಿ ಬರೆದರು.     

ಇಂಧೋರ್(ಮೇ.04): ಸೂರ್ಯಕಾಂತ್ ಯಾದವ್, ಕೃನಾಲ್ ಪಾಂಡ್ಯ, ರೋಹಿತ್, ಇಶಾಂತ್ ಅವರ ಸ್ಫೋಟಕ ಆಟದಿಂದ ಪಂಜಾಬ್ ತಂಡವನ್ನು 6 ವಿಕೇಟ್'ಗಳಿಂದ ಮಣಿಸಿದ  ಮುಂಬೈ ಇಂಡಿಯನ್ಸ್ ತಂಡ  ಪ್ಲೇ ಆಫ್ ಆಸೆ ಜೀವಂತವಾಗಿಸಿಕೊಂಡಿದೆ.
ಪಂಜಾಬ್ ನೀಡಿದ್ದ 175 ರನ್ ಸವಾಲನ್ನು 19 ಓವರ್'ಗಳಲ್ಲಿ ಸಂಪೂರ್ಣಗೊಳಿಸಿದರು. ಸೂರ್ಯಕಾಂತ್ ಯಾದವ್ (57, 3 ಸಿಕ್ಸ್, 6 ಬೌಂಡರಿ), ಕೃನಾಲ್ ಪಾಂಡ್ಯ(31, 2 ಸಿಕ್ಸ್, 4 ಬೌಂಡರಿ) ಇಶಾನ್(25, 3 ಸಿಕ್ಸ್) ಅದ್ಭುತ ಆಟವಾಡಿ ಗೆಲುವಿನ ಮುನ್ನಡಿ ಬರೆದರು.       
ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ತಂಡ ಪಂಜಾಬ್ ಪಡೆಯನ್ನು ಬ್ಯಾಟಿಂಗ್ ಆಹ್ವಾನಿಸಿತು. ಗೇಲ್ (50: 2 ಸಿಕ್ಸ್, 6 ಬೌಂಡರಿ), ಸ್ಟೋನಿಸ್ (29 : 2 ಸಿಕ್ಸ್ 2 ಬೌಂಡರಿ), ರಾಹುಲ್ (2 ಸಿಕ್ಸ್, 1 ಬೌಂಡರಿ), ಕರಣ್ ನಾಯರ್ 23  (2 ಸಿಕ್ಸ್ , 1 ಬೌಂಡರಿ) ನೆರವಿನಿಂದ 20 ಓವರ್'ಗಳಲ್ಲಿ 174/6 ದಾಖಲಿಸಿದರು.

ಸ್ಕೋರ್  
ಪಂಜಾಬ್ 20 ಓವರ್'ಗಳಲ್ಲಿ 174/6
(ಗೇಲ್ 50,  ಸ್ಟೋನಿಸ್ 29)

ಮುಂಬೈ ಇಂಡಿಯನ್ಸ್ 19 ಓವರ್'ಗಳಲ್ಲಿ  176/4
(ಎಸ್.ಯಾದವ್ 57, ಕೆ. ಪಾಂಡ್ಯ 31)

ಮುಂಬೈ'ಗೆ 6 ವಿಕೇಟ್ ಜಯ 

loader