ಮುಂಬೈ(ಮೇ.06): ಪ್ಲೇಆಫ್ ಹಂತವನ್ನು ಪ್ರವೇಶಿಸಬೇಕೆನ್ನುವ  ಹೋರಾಟದ ಹಾದಿಯಲ್ಲಿರುವ ಮುಂಬೈ ಇಂಡಿಯನ್ಸ್ ಕೆಕೆಆರ್ ವಿರುದ್ಧ 13 ರನ್'ಗಳ ರೋಚಕ ಗೆಲುವು ಸಾಧಿಸಿದೆ.
ಮುಂಬೈ ನೀಡಿದ 182 ರನ್'ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ 168/6 ಗಳಿಸಲಷ್ಟೆ ಶಕ್ತವಾಯಿತು. ಕನ್ನಡಿಗ ಉತ್ತಪ್ಪ(54),ರಾಣ(31) ಹಾಗೂ ನಾಯಕ ದಿನೇಶ್ ಕಾರ್ತಿಕ್ ಅಜೇಯ (36) ರನ್ ಗಳಿಸಿ ಪ್ರತಿರೋಧ ತೋರಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮುಂಬೈ ಪರ ಹಾರ್ದಿಕ್ ಪಾಂಡ್ಯ 19/2 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಕೋಲ್ಕತ್ತಾ ಮುಂಬೈ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿ ಸೂರ್ಯಕುಮಾರ್ ಯಾದವ್(59) ಆಕರ್ಷಕ ಅರ್ಧಶತಕ ಹಾಗೂ ಎವಿನ್ ಲೆವಿಸ್ ಸ್ಫೋಟಕ(43) ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್'ಗೆ 182 ರನ್'ಗಳ ಸವಾಲಿನ ಗುರಿ ನೀಡಿತ್ತು.

ಸ್ಕೋರ್: 
ಮುಂಬೈ: 181/4
(ಸೂರ್ಯಕುಮಾರ್ ಯಾದವ್ 59,ರಸೆಲ್: 12/2)
ಕೆಕೆಆರ್ 168/6
(ಉತ್ತಪ್ಪ 54)

ಪಂದ್ಯ ಪುರುಷೋತ್ತಮ : ಹಾರ್ದಿಕ್ ಪಾಂಡ್ಯ