ತಂಡ ಉತ್ತಮ ಪ್ರದರ್ಶನ ತೋರುತ್ತಿಲ್ಲ ಎಂದರೆ ತಂಡದ ಮಾಲೀಕರು ಹಾಗೂ ಪ್ರಾಂಚೈಸಿಗಳು ಆತಂಕ ಪಡಬೇಕಿಲ್ಲ, ಸ್ವಲ್ಪ ತಾಳ್ಮೆಯಿಂದಿದ್ದರೆ ಸಾಕು ತಾನಾಗಿಯೇ ಸರಿಹೋಗುತ್ತದೆ. ಈ ವಿಚಾರವನ್ನು ಶ್ರೇಷ್ಠ ನಾಯಕರಾದ ಧೋನಿ ಹಾಗೂ ರಿಕಿ ಪಾಂಟಿಂಗ್ ಅವರಿಂದ ಕಲಿತಿದ್ದೇನೆ ಎಂದು ಪ್ರಾಂಚೈಸಿಗಳಿಗೆ ಹಸ್ಸಿ ಕಿವಿ ಮಾತು ಹೇಳಿದ್ದಾರೆ.

ಬೆಂಗಳೂರು(ಆ.02]: ಆಗಸ್ಟ್ 15 ರಿಂದ ಆರಂಭವಾಗಲಿರುವ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನಲ್ಲಿ ಅದ್ಭುತ ಪ್ರದರ್ಶನ ತೋರುವ ಪ್ರತಿಭಾನ್ವಿತರನ್ನು, ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿಸಿಕೊಳ್ಳುವುದಾಗಿ ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಭರವಸೆ ನೀಡಿದ್ದಾರೆ. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಹಸ್ಸಿ, ‘ಕೆಪಿಎಲ್‌ನಲ್ಲಿ ಶ್ರದ್ಧೆಯಿಟ್ಟು ಆಡಿ, ನಾನು ಗಮಿಸುತ್ತಿರುತ್ತೇನೆ. ಸಿಎಸ್‌ಕೆ ತಂಡದ ಅಗತ್ಯಕ್ಕೆ ತಕ್ಕಂತೆ ಆಡಿದರೆ ಅಂತಹ ಆಟಗಾರರನ್ನು ಮುಂದಿನ ವರ್ಷ ಐಪಿಎಲ್‌ನಲ್ಲಿ ಸೇರಿಸಿಕೊಳ್ಳುವ ಬಗ್ಗೆ ನಿರ್ಧರಿಸಲಿದ್ದೇನೆ. ಕೆಪಿಎಲ್, ಖಂಡಿತವಾಗಿಯೂ ಐಪಿಎಲ್‌ಗೆ ವೇದಿಕೆ ಕಲ್ಪಿಸಲಿದೆ’ ಎಂದರು. ಭಾರತದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಕೆಪಿಎಲ್‌ನಂತಹ ಲೀಗ್‌ಗಳ ಅಗತ್ಯವಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟರು. 