ಮುಂಬೈ(ಜ.19): ಮುಂಬೈ ಕ್ರಿಕೆಟ್ ಸಂಸ್ಥೆ(MCA) ಇದೇ ಮೊದಲ ಬಾರಿಗೆ ಅತ್ಯಂತ ಕಠಿಣ ನಿರ್ಧಾರ ಕೈಗೊಂಡಿದೆ. ಅನುಚಿತ ವರ್ತನೆ ತೋರಿದ ಕ್ರಿಕೆಟಿಗನಿಗೆ ಬರೋಬ್ಬರಿ 3 ವರ್ಷ ನಿಷೇಧದ ಶಿಕ್ಷೆ ನೀಡಲಾಗಿದೆ. ನಿಯಮ ಮೀರಿದ ಮುಂಬೈ ಅಂಡರ್-16 ತಂಡದ ನಾಯಕ ಮುಶೀರ್ ಖಾನ್‌ಗೆ  MCA  3 ವರ್ಷ ಶಿಕ್ಷೆ ನೀಡಿದೆ.

ಇದನ್ನೂ ಓದಿ: ರೋಜರ್ ಫೆಡರರ್ ಭೇಟಿಯಾದ ವಿರುಷ್ಕಾ ಜೋಡಿ!

ಮುಂಬೈ ತಂಡದ  ಸಹ ಆಟಗಾರರು ನಾಯಕ ಮುಶೀರ್ ಖಾನ್ ವಿರುದ್ಧ ದೂರು ನೀಡಿದ್ದರು. ಅನುಚಿತ ವರ್ತನೆ ಆರೋಪದಡಿ ತನಿಖೆ ನಡೆಸಿದ ಮುಂಬೈ ಕ್ರಿಕೆಟ್ ಸಂಸ್ಥೆ ಮುಶೀರ್‌ಗೆ ಶಿಕ್ಷೆ ನೀಡಿದೆ. ಹೀಗಾಗಿ ಆಂಧ್ರಪ್ರದೇಶ ವಿರುದ್ಧದ ವಿಜಯ್ ಮರ್ಚೆಂಟ್ ಕ್ವಾರ್ಟರ್ ಫೈನಲ್ ಪಂದ್ಯದಿಂದಲೇ ಮುಶೀರ್ ಖಾನ್‌ನ್ನ ಹೊರಗಿಡಲಾಗಿದೆ.

ಇದನ್ನೂ ಓದಿ: ಎಂ.ಎಸ್.ಧೋನಿ ಸೂಪರ್ ಸ್ಟಾರ್ ಮಾತ್ರವಲ್ಲ ಯಾವತ್ತಿಗೂ ಶ್ರೇಷ್ಠ-ಲ್ಯಾಂಗರ್

2022ರ ವರೆಗೆ ಮುಶೀರ್ ಖಾನ್ ಮುಂಬೈನ ಯಾವುದೇ ತಂಡದಲ್ಲಿ ಆಡುವಂತಿಲ್ಲ. ಇಷ್ಟೇ ಅಲ್ಲ ಇದು ಅನುಚಿತ ವರ್ತನೆ ತೋರೋ ಎಲ್ಲಾ ಕ್ರಿಕೆಟಿಗರಿಗೂ ಎಚ್ಚರಿಕೆ ಗಂಟೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಹೇಳಿದೆ.  ಅಮಾನತ್ತಾಗಿರುವ ಮುಶೀರ್ ಖಾನ್, ಟೀಂ ಇಂಡಿಯಾ ಅಂಡರ್ 19 ತಂಡದ ಪ್ರತಿನಿಧಿಸಿದ ಸರ್ಫರಾಜ್ ಖಾನ್ ಸಹೋದರ. ಸರ್ಫರಾಜ್ ಖಾನ್ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೂ ಆಡಿದ್ದರು.