ಜೈಪುರ[ಮೇ.07] 11ನೇ ಆವೃತ್ತಿಯ ಐಪಿಎಲ್’ನಲ್ಲಿ ಈಗಾಗಲೇ ಸಾಕಷ್ಟು ಅದ್ಭುತ ಕ್ಯಾಚ್’ಗಳಿಗೆ ಸಾಕ್ಷಿಯಾಗಿದ್ದೇವೆ. ವಿರಾಟ್ ಕೊಹ್ಲಿ,  ಬೆನ್ ಸ್ಟೋಕ್ಸ್, ಟ್ರೆಂಟ್ ಬೌಲ್ಟ್ ಸೇರಿದಂತೆ ಹಲವಾರು ಕ್ರಿಕೆಟಿಗರು ಮನಮೋಹಕ ಕ್ಯಾಚ್ ಹಿಡಿಯುವ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ.
ಈ ಪಟ್ಟಿಗೆ ಹೊಸ ಸೇರ್ಪಡೆ ಮಯಾಂಕ್ ಅಗರ್’ವಾಲ್ ಹಾಗೂ ಮನೋಜ್ ತಿವಾರಿ ಜಂಟಿ ಕ್ಯಾಚ್. ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಮುಜೀಬ್ ರೆಹಮಾನ್ ಬೌಲಿಂಗ್’ನಲ್ಲಿ ಬೆನ್ ಸ್ಟೋಕ್ಸ್ ಬಾರಿಸಿದ ಚೆಂಡನ್ನು ಮಯಾಂಕ್ ಅಗರ್’ವಾಲ್ ಬೌಂಡರಿ ಲೈನ್’ನಲ್ಲಿ ಕ್ಯಾಚ್ ಪಡೆದು ಮನೋಜ್ ತಿವಾರಿಗೆ ಪಾಸ್ ನೀಡಿದ್ದಾರೆ. ಈ ಅದ್ಭುತ ಕ್ಯಾಚ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಹೀಗಿತ್ತು ಆ ಅದ್ಭುತ ಕ್ಯಾಚ್: