ನವದೆಹಲಿ: ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್, ಭಾರತ ತಂಡದ ಶೇನ್ ವಾರ್ನ್ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೆಡನ್ ಹೊಗಳಿದ್ದಾರೆ.

ಅಶ್ವಿನ್-ಕುಲ್ದೀಪ್ ಇಬ್ಬರಲ್ಲಿ ಕೋಚ್ ಶಾಸ್ತ್ರಿ ಮೊದಲ ಆಯ್ಕೆ ಯಾರು..?

ಯಜುವೇಂದ್ರ ಚಹಲ್‌ಗೆ ಹೋಲಿಕೆ ಮಾಡಿದರೆ, ಕುಲ್ದೀಪ್ ಬೌಲಿಂಗ್ ಎದುರಿಸುವುದು ಕಷ್ಟ ಎಂದಿದ್ದಾರೆ. ಕುಲ್ದೀಪ್ ಹಾಗೂ ಚಹಲ್ ಇಬ್ಬರು ಅದ್ಭುತ ಬೌಲರ್‌ಗಳಾಗಿದ್ದು,ಸೀಮಿತ ಓವರ್‌ಗಳ ಮಾದರಿಯ ಪಂದ್ಯಗಳಲ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಕಾಡುವ ತಂತ್ರಗಾರಿಕೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಬೌಲಿಂಗ್ ಹೇಳಿಕೊಟ್ಟು ವಿಕೆಟ್ ಎಗರಿಸಿದ ಧೋನಿ: ವಿಡಿಯೋ ವೈರಲ್..!

ಚಹಲ್ 6 ಟೆಸ್ಟ್ ಪಂದ್ಯಗಳನ್ನಾಡಿ 24 ವಿಕೆಟ್ ಪಡೆದಿದ್ದರೆ, ಏಕದಿನ ಕ್ರಿಕೆಟ್’ನಲ್ಲಿ 43 ಪಂದ್ಯಗಳನ್ನಾಡಿ 86 ವಿಕೆಟ್ ಪಡೆದಿದ್ದಾರೆ. ಇನ್ನು ಟಿ20ಯಲ್ಲೂ ಕಮಾಲ್ ಮಾಡಿರುವ ಚಹಲ್ 18 ಪಂದ್ಯಗಳನ್ನಾಡಿ 35 ವಿಕೆಟ್ ಪಡೆದಿದ್ದಾರೆ.