ಕೊಹ್ಲಿ ಟೀಮ್ ಇಂಡಿಯಾದ ಜೂನಿಯರ್ ಸಚಿನ್ ಎನ್ನುವ ಮಾತು ಕೇಳಿಬರುತ್ತಿದ್ದು, ಇದೇ ಸಂದರ್ಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಹೆಸರಿನಲ್ಲಿದ್ದ ದಾಖಲೆಯೊಂದು ಸದ್ಯ ಕೊಹ್ಲಿ ಹೆಸರಿಗೆ ಸೇರಿಕೊಂಡಿದೆ. ಸಚಿನ್ ತೆಂಡೂಲ್ಕರ್ ವಿಶ್ವದಾಖಲೆಯನ್ನು ಕೊಹ್ಲಿ ಮುಟ್ಟಿದ್ದಾರೆ. 

ಮೊಹಾಲಿ(ಅ.24): ಸದ್ಯದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮುಟ್ಟಿದೆಲ್ಲವೂ ದಾಖಲೆಗಳಾಗುತ್ತಿದೆ. ಅದರಲ್ಲಿಯೂ ಚೇಸಿಂಗ್ ಪಂದ್ಯದಲ್ಲಿ ಕೊಹ್ಲಿಯ ಆಟವಂತು ಅದ್ಬುತ ಎನ್ನುವುದು ಅಭಿಮಾನಿಗಳ ಅನಿಸಿಕೆಯಾಗಿದ್ದು, ದಾಖಲೆಗಳು ಸಹ ಇದಕ್ಕೆ ಸಾಕ್ಷಿಯಾಗಿದೆ. 

ಕೊಹ್ಲಿ ಟೀಮ್ ಇಂಡಿಯಾದ ಜೂನಿಯರ್ ಸಚಿನ್ ಎನ್ನುವ ಮಾತು ಕೇಳಿಬರುತ್ತಿದ್ದು, ಇದೇ ಸಂದರ್ಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಹೆಸರಿನಲ್ಲಿದ್ದ ದಾಖಲೆಯೊಂದು ಸದ್ಯ ಕೊಹ್ಲಿ ಹೆಸರಿಗೆ ಸೇರಿಕೊಂಡಿದೆ. ಸಚಿನ್ ತೆಂಡೂಲ್ಕರ್ ವಿಶ್ವದಾಖಲೆಯನ್ನು ಕೊಹ್ಲಿ ಮುಟ್ಟಿದ್ದಾರೆ. 

ಚೇಸಿಂಗ್ ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ ಕೊಹ್ಲಿ, ಕೇವಲ 59 ಇನ್ನಿಂಗ್ಸ್ ನಲ್ಲಿ 14 ಶತಕ ಸಿಡಿಸಿದ್ದಾರೆ. ಆದರೆ ಇದೇ ಸಾಧನೆಯನ್ನು ಮಾಡಲು ಸಚಿನ್ ತೆಗೆದುಕೊಂಡ ಇನ್ನಿಂಗ್ಸ್ 124. ಈ ದಾಖಲೆಗಳೇ ಕೊಹ್ಲಿಯ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿವೆ.