ವಿಶ್ವ ಲೀಗ್‌ ಟೂರ್ನಿಯಲ್ಲಿ ಭಾರತ ತಂಡವು ಬಿ ಗುಂಪಿನಲ್ಲಿ ಸ್ಥಾನಪಡೆದಿದ್ದು, ಇದೇ ಗುಂಪಿನಲ್ಲಿ ಕೆನಡ, ನೆದರ್'ಲ್ಯಾಂಡ್, ಪಾಕಿಸ್ತಾನ ಹಾಗೂ ಸ್ಕಾಟ್'ಲ್ಯಾಂಡ್ ತಂಡಗಳು ಸ್ಥಾನ ಪಡೆದಿವೆ.

ನವದೆಹಲಿ(ಮೇ.19): ಜರ್ಮನಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ 3 ರಾಷ್ಟ್ರಗಳ ಆಹ್ವಾನಿತ ಹಾಕಿ ಸರಣಿ ಹಾಗೂ ಲಂಡನ್‌'ನಲ್ಲಿ ನಡೆಯಲಿರುವ ವಿಶ್ವ ಲೀಗ್‌ ಸೆಮಿಫೈನಲ್‌ ಪಂದ್ಯಾವಳಿಗೆ ಭಾರತ ತಂಡ ಪ್ರಕಟಗೊಂಡಿದೆ.

18 ಮಂದಿ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ವಿಶ್ವ ಲೀಗ್ ಹಾಕಿಗೂ ಮುನ್ನ ಜರ್ಮನಿ ಹಾಗೂ ಬೆಲ್ಜಿಯಂ ತಂಡಗಳ ಎದುರು ಆಡಲು ಕಣಕ್ಕಿಳಿಯಲಿದೆ.

ಇನ್ನು ವಿಶ್ವ ಲೀಗ್‌ ಟೂರ್ನಿಯಲ್ಲಿ ಭಾರತ ತಂಡವು ಬಿ ಗುಂಪಿನಲ್ಲಿ ಸ್ಥಾನಪಡೆದಿದ್ದು, ಇದೇ ಗುಂಪಿನಲ್ಲಿ ಕೆನಡ, ನೆದರ್'ಲ್ಯಾಂಡ್, ಪಾಕಿಸ್ತಾನ ಹಾಗೂ ಸ್ಕಾಟ್'ಲ್ಯಾಂಡ್ ತಂಡಗಳು ಸ್ಥಾನ ಪಡೆದಿವೆ.

ತಂಡದ ವಿವರ ಇಂತಿದೆ:

ಗೋಲ್‌ ಕೀಪರ್‌ಗಳು: ಆಕಾಶ್‌, ವಿಕಾಸ್‌.

ಡಿಫೆಂಡರ್‌ಗಳು: ಪ್ರದೀಪ್‌, ಕೊಥಾಜಿತ್‌, ಸುರೇಂದ್ರ, ರೂಪಿಂದರ್‌, ಹರ್ಮನ್‌.

ಮಿಡ್‌'ಫೀಲ್ಡ​ರ್ಸ್: ಚಿಂಗ್ಲೆನ್‌'ಸಾನ, ಎಸ್‌.ಕೆ.ಉತ್ತಪ್ಪ, ಸತ್ಬೀತ್‌ ಸಿಂಗ್‌, ಸರ್ದಾರ್‌ ಸಿಂಗ್‌, ಮನ್‌'ಪ್ರೀತ್‌ ಸಿಂಗ್‌, ಹರ್ಜೀತ್‌ ಸಿಂಗ್‌.

ಫಾರ್ವರ್ಡ್ಸ್: ರಮಣ್‌'ದೀಪ್‌'ಸಿಂಗ್‌, ಎಸ್‌.ವಿ.ಸುನಿಲ್‌, ತಲ್ವಿಂದರ್‌ ಸಿಂಗ್‌, ಮನ್‌'ದೀಪ್‌ ಸಿಂಗ್‌, ಆಕಾಶ್‌'ದೀಪ್‌ ಸಿಂಗ್‌.