ಫೈನಲ್'ನಲ್ಲಿ ಮುಗ್ಗರಿಸಿದ ಬಿಎಫ್'ಸಿ; ಚೆನ್ನೈಯಿನ್ ಚಾಂಪಿಯನ್

First Published 17, Mar 2018, 10:40 PM IST
Malison Augusto help Chennaiyin FC beat Bengaluru FC 3 to 2 to lift 2nd ISL title
Highlights

Iನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯವು ಸಾಕಷ್ಟು ರೋಚಕತೆಗೆ ಸಾಕ್ಷಿಯಾಗಿತ್ತು. ಬಿಎಫ್‌ಸಿ ಪರ ನಾಯಕ ಸುನಿಲ್ ಚೆಟ್ರಿ (9ನೇ ನಿ.) ಗೋಲು ಬಾರಿಸುವ ಮೂಲಕ ಖಾತೆ ಆರಂಭಿಸಿದರು.

ಬೆಂಗಳೂರು(ಮಾ.17): ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಪಟ್ಟಕ್ಕೇರುವ ಕನಸು ಭಗ್ನವಾಗಿದೆ. ಬಿಎಫ್'ಸಿಯನ್ನು 2-3 ಗೋಲುಗಳಿಂದ ಮಣಿಸಿದ ಚೆನ್ನೈಯಿನ್ ಎಫ್'ಸಿ ಎರಡನೇ ಬಾರಿಗೆ ಐಎಸ್ಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯವು ಸಾಕಷ್ಟು ರೋಚಕತೆಗೆ ಸಾಕ್ಷಿಯಾಗಿತ್ತು. ಬಿಎಫ್‌ಸಿ ಪರ ನಾಯಕ ಸುನಿಲ್ ಚೆಟ್ರಿ (9ನೇ ನಿ.) ಗೋಲು ಬಾರಿಸುವ ಮೂಲಕ ಖಾತೆ ಆರಂಭಿಸಿದರು. ಇನ್ನು ಚೆನ್ನೈ ಪರ ಮೈಲ್ಸನ್ ಅಲ್ವೀಸ್ 17ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸುವಂತೆ ಮಾಡಿದರು. ಇದಾದ ಕೆಲಹೊತ್ತಿನಲ್ಲೇ ಮೈಲ್ಸನ್ ಅಲ್ವೀಸ್ ಮತ್ತೊಂದು ಗೋಲು ಬಾರಿಸಿ ಚೆನ್ನೈಗೆ ಮುನ್ನಡೆ ಒದಗಿದರು.

ರಾಫೆಲ್ ಅಗಸ್ಟೊ(67ನೇ ನಿ.) ಬೆಂಗಳೂರು ರಕ್ಷಣಾ ಕೋಟೆ ವಂಚಿಸಿ ಗೋಲು ಬಾರಿಸುವ ಮೂಲಕ ಗೋಲಿನ ಅಂತರ 3-1ಕ್ಕೆ ಹೆಚ್ಚಿಸಿದರು. ಪಂದ್ಯದ 90ನೇ ನಿಮಿಷದಲ್ಲಿ ಬಿಎಫ್'ಸಿ ಸ್ಟಾರ್ ಆಟಗಾರ ಮಿಕು ಗೋಲು ಸಿಡಿಸಿ ಪಂದ್ಯಕ್ಕೆ ರೋಚಕತೆ ಹೆಚ್ಚಿಸಿದರಾದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

loader