‘ಶೀತಲ್‌ ನಮಗೆಲ್ಲರಿಗೂ ಸ್ಫೂರ್ತಿ ತುಂಬಿದ್ದಾರೆ. ನಮ್ಮ ಬ್ರ್ಯಾಂಡ್‌ನ ಯಾವುದೇ ಕಾರನ್ನು ನೀವು ಆಯ್ಕೆ ಮಾಡಿ, ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಪರಿವರ್ತಿಸಿ ಕೊಡುತ್ತೇವೆ’ ಎಂದು ಶೀತಲ್‌ಗೆ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಶೀತಲ್‌ ಕ್ರೀಡಾಕೂಟದ ವೈಯಕ್ತಿಕ, ಮಿಶ್ರ ತಂಡ ಕಾಂಪೌಂಡ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

ನವದೆಹಲಿ(ಅ): ಎರಡು ಕೈಗಳಿಲ್ಲದ ಹೊರತಾಗಿಯೂ ಏಷ್ಯನ್‌ ಪ್ಯಾರಾ ಗೇಮ್ಸ್‌ನ ಆರ್ಚರಿಯಲ್ಲಿ 2 ಚಿನ್ನ ಸೇರಿ 3 ಪದಕ ಗೆದ್ದ ಭಾರತದ ಶೀತಲ್‌ ದೇವಿ ಸಾಧನೆಗೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಮನಸೋತಿದ್ದು, ಆಕೆಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ. 

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌(ಟ್ವೀಟರ್‌)ನಲ್ಲಿ ಬರೆದಿರುವ ಅವರು, ‘ಶೀತಲ್‌ ನಮಗೆಲ್ಲರಿಗೂ ಸ್ಫೂರ್ತಿ ತುಂಬಿದ್ದಾರೆ. ನಮ್ಮ ಬ್ರ್ಯಾಂಡ್‌ನ ಯಾವುದೇ ಕಾರನ್ನು ನೀವು ಆಯ್ಕೆ ಮಾಡಿ, ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಪರಿವರ್ತಿಸಿ ಕೊಡುತ್ತೇವೆ’ ಎಂದು ಶೀತಲ್‌ಗೆ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಶೀತಲ್‌ ಕ್ರೀಡಾಕೂಟದ ವೈಯಕ್ತಿಕ, ಮಿಶ್ರ ತಂಡ ಕಾಂಪೌಂಡ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

Scroll to load tweet…

ವಿಶ್ವಕಪ್‌ನ ಅಗ್ರ 7 ತಂಡ ಚಾಂಪಿಯನ್ಸ್‌ ಟ್ರೋಫಿಗೆ ಪ್ರವೇಶ; ಇಂಗ್ಲೆಂಡ್ ತಂಡದ ಪಾಡೇನು?

ಎರಡೂ ಕೈಗಳಿಲ್ಲದ ಶೀತಲ್‌ಗೆ 2 ಚಿನ್ನ!

ಎರಡೂ ಕೈಗಳಿಲ್ಲದಿದ್ದರೂ ಆರ್ಚರಿಯಲ್ಲಿ ಸ್ಪರ್ಧಿಸಿದ್ದ ಶೀತಲ್‌ ದೇವಿ ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 2ನೇ ಚಿನ್ನ ಗೆದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದರು. ಶುಕ್ರವಾರ ಜಮ್ಮು-ಕಾಶ್ಮೀರದ 16ರ ಶೀತಲ್‌ ವೈಯಕ್ತಿಕ ಕಾಂಪೌಂಡ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಇದಕ್ಕೂ ಮುನ್ನ ಕಾಂಪೌಂಡ್‌ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ, ಮಹಿಳೆಯರ ಡಬಲ್ಸ್‌ನಲ್ಲಿ ಬೆಳ್ಳಿ ಸಂಪಾದಿಸಿದ್ದರು. ಅಂದ ಹಾಗೆ ಶೀತಲ್‌ ಎರಡೂ ಕೈಗಳಿಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಆರ್ಚರಿಯಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಮಹಿಳಾ ಸ್ಪರ್ಧಿ.

ಭಾರತದ ಪ್ಯಾರಾ ಅಥ್ಲೀಟ್‌ಗಳು 2022ರ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ 111 ಪದಕಗಳೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. ಇದು ಯಾವುದೇ ಅಂತಾರಾಷ್ಟ್ರೀಯ ಬಹು-ಕ್ರೀಡೆಯನ್ನೊಳಗೊಂಡ ಕೂಟದಲ್ಲಿ ಭಾರತದ ಗರಿಷ್ಠ ಪದಕ ಸಾಧನೆ ಎನಿಸಿದೆ. 29 ಚಿನ್ನ, 31 ಬೆಳ್ಳಿ, 51 ಕಂಚಿನ ಪದಕಗಳನ್ನು ಬಾಚಿಕೊಂಡ ಭಾರತದ ಪ್ಯಾರಾ ಅಥ್ಲೀಟ್‌ಗಳು, ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಗೆದ್ದಿದ್ದ 107 ಪದಕಗಳ ದಾಖಲೆಯನ್ನು ಮುರಿದರು. ಪದಕ ಪಟ್ಟಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಅಗ್ರ-5ರಲ್ಲಿ ಸ್ಥಾನ ಪಡೆಯಿತು. 214 ಚಿನ್ನ ಸೇರಿ ಬರೋಬ್ಬರಿ 521 ಪದಕ ಗೆದ್ದ ಚೀನಾ ಅಗ್ರಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು.

ICC World Cup 2023: ಸೆಮೀಸ್‌ ರೇಸಲ್ಲಿ ಉಳಿಯಲು ಶ್ರೀಲಂಕಾ-ಆಫ್ಘನ್‌ ಕಾದಾಟ

ಮಹಿಳಾ ಏಷ್ಯನ್‌ ಹಾಕಿ: ಇಂದು ಭಾರತ vs ಚೀನಾ

ರಾಂಚಿ: 2023ರ ಮಹಿಳಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸತತ 2 ಗೆಲುವಿನೊಂದಿಗೆ ಶುಭಾರಂಭ ಮಾಡಿರುವ ಆತಿಥೇಯ ಭಾರತ, ಸೋಮವಾರ ಚೀನಾ ವಿರುದ್ಧ ಸೆಣಸಾಡಲಿದೆ. ಥಾಯ್ಲೆಂಡ್‌ ವಿರುದ್ಧ 7-1, ಮಲೇಷ್ಯಾ ವಿರುದ್ಧ 6-0 ಅಂತರದಲ್ಲಿ ಗೆದ್ದಿರುವ 2016ರ ಚಾಂಪಿಯನ್‌ ಭಾರತ ಸದ್ಯ 6 ತಂಡಗಳಿರುವ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹ್ಯಾಟ್ರಿಕ್‌ ಗೆಲುವಿನ ಮೂಲಕ ನಂ.1 ಸ್ಥಾನದಲ್ಲೇ ಮುಂದುವರಿಯುವ ನಿರೀಕ್ಷೆಯಲ್ಲಿದೆ. ಅತ್ತ ಚೀನಾ ತಾನಾಡಿರುವ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಪಂದ್ಯ: ರಾತ್ರಿ 8.30ಕ್ಕೆ