ICC World Cup 2023: ಸೆಮೀಸ್‌ ರೇಸಲ್ಲಿ ಉಳಿಯಲು ಶ್ರೀಲಂಕಾ-ಆಫ್ಘನ್‌ ಕಾದಾಟ

ಸದ್ಯ ಎರಡೂ ತಂಡಗಳು ಆಡಿರುವ 5 ಪಂದ್ಯಗಳಲ್ಲಿ ತಲಾ 2 ಗೆಲುವಿನೊಂದಿಗೆ 4 ಅಂಕ ಸಂಪಾದಿಸಿವೆ. ಹೀಗಾಗಿ ಇತ್ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋಲುವ ತಂಡಕ ನಾಕೌಟ್‌ ಹಾದಿ ಬಹುತೇಕ ಬಂದ್‌ ಆಗಲಿದೆ.

ICC World Cup 2023 Sri Lanka take on Afghanistan Challenge at Pune kvn

ಪುಣೆ(ಅ.30): ಹ್ಯಾಟ್ರಿಕ್‌ ಸೋಲುಗಳ ಬಳಿಕ ಸತತ 2 ಪಂದ್ಯ ಗೆದ್ದಿರುವ ಶ್ರೀಲಂಕಾ ಹಾಗೂ ಬಲಿಷ್ಠ ತಂಡಗಳನ್ನು ಸೋಲಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಿರುವ ಅಫ್ಘಾನಿಸ್ತಾನ ತಂಡಗಳು ಸೋಮವಾರ ಪರಸ್ಪರ ಮುಖಾಮುಖಿಯಾಗಲಿವೆ. ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯ. ಪಂದ್ಯಕ್ಕೆ ಪುಣೆ ಆತಿಥ್ಯ ವಹಿಸಲಿದೆ.

ಸದ್ಯ ಎರಡೂ ತಂಡಗಳು ಆಡಿರುವ 5 ಪಂದ್ಯಗಳಲ್ಲಿ ತಲಾ 2 ಗೆಲುವಿನೊಂದಿಗೆ 4 ಅಂಕ ಸಂಪಾದಿಸಿವೆ. ಹೀಗಾಗಿ ಇತ್ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋಲುವ ತಂಡಕ ನಾಕೌಟ್‌ ಹಾದಿ ಬಹುತೇಕ ಬಂದ್‌ ಆಗಲಿದೆ. ಲಂಕಾ ಗಾಯದ ಸಮಸ್ಯೆಯ ನಡುವೆಯೂ ತನ್ನಿಂದಾಗುವ ಗರಿಷ್ಠ ಪ್ರಮಾಣದ ಆಟ ಪ್ರದರ್ಶಿಸುತ್ತಿದ್ದು, ಕಳೆದ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಹೀನಾಯ ಸೋಲಿನ ರುಚಿ ತೋರಿಸಿತ್ತು. ಆಫ್ಘನ್ನರನ್ನು ಲಘುವಾಗಿ ಪರಿಗಣಿಸದೆ ನೈಜ ಆಟ ಪ್ರದರ್ಶಿಸಿದರೆ ತಂಡಕ್ಕೆ ಹ್ಯಾಟ್ರಿಕ್‌ ಗೆಲುವು ದಕ್ಕಬಹುದು.

INDvENG ಗಿರಗಿರ ತಿರುಗಿದ ಇಂಗ್ಲೆಂಡ್ 129 ರನ್‌ಗೆ ಆಲೌಟ್, ಭಾರತದ ವಿಶ್ವಕಪ್ ಸೆಮೀಸ್ ಹಾದಿ ಸುಲಭ!

ಅತ್ತ ಆಫ್ಘನ್‌ ತಂಡ ಇಂಗ್ಲೆಂಡ್‌ ಹಾಗೂ ಪಾಕ್‌ ವಿರುದ್ಧದ ಗೆಲುವಿನ ಹುಮ್ಮಸ್ಸಿನಲ್ಲಿದೆ. ತನ್ನ ದಿನದಂದು ಎಷ್ಟೇ ಬಲಿಷ್ಠ ತಂಡಕ್ಕೂ ಸೋಲುಣಿಸಬಲ್ಲ ಆಫ್ಘನ್‌, ಯಾರೂ ಊಹಿಸಲಾಗದ ರೀತಿಯಲ್ಲಿ ಕಳಪೆ ಪ್ರದರ್ಶನ ನೀಡುವುದಕ್ಕೂ ಹೆಸರುವಾಸಿ. ತಜ್ಞ ಸ್ಪಿನ್ನರ್‌ಗಳ ಜೊತೆ ಸ್ಫೋಟಕ ಬ್ಯಾಟರ್‌ಗಳೂ ಅಬ್ಬರಿಸಿದರೆ ಮಾತ್ರ ಮತ್ತೊಂದು ಅಚ್ಚರಿಯ ಫಲಿತಾಂಶ ನಿರೀಕ್ಷಿಸಬಹುದು.

ಲಂಕಾಕ್ಕೆ ಮತ್ತೆ ಆಘಾತ: ವೇಗಿ ಲಹಿರು ಹೊರಕ್ಕೆ

ಪುಣೆ: ಗಾಯದಿಂದಾಗಿ ಈಗಾಗಲೇ ಪ್ರಮುಖರ ಸೇವೆಯಿಂದ ವಂಚಿತರಾಗಿರುವ ಶ್ರೀಲಂಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ತಂಡದ ವೇಗಿ ಲಹಿರು ಕುಮಾರ ಏಕದಿನ ವಿಶ್ವಕಪ್‌ನಿಂದಲೇ ಹೊರಬಿದ್ದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಲಹಿರು 3 ವಿಕೆಟ್‌ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೀಸಲು ಆಟಗಾರನಾಗಿ ತಂಡದ ಜೊತೆಗಿದ್ದ ದುಷ್ಮಾಂತ ಚಮೀರ ಅವರನ್ನು ಲಹಿರು ಬದಲು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಸಾರಾ ಹೃದಯಭಗ್ನ; ತೆಂಡುಲ್ಕರ್ ಮಗಳ ಹೊಸ ಪೋಸ್ಟ್ ವೈರಲ್..! ಯಾಕೆ? ಏನಾಯ್ತು?

ಒಟ್ಟು ಮುಖಾಮುಖಿ: 11

ಶ್ರೀಲಂಕಾ: 07

ಅಫ್ಘಾನಿಸ್ತಾನ: 03

ಫಲಿತಾಂಶವಿಲ್ಲ: 01

ಸಂಭವನೀಯರ ಪಟ್ಟಿ

ಶ್ರೀಲಂಕಾ: ನಿಸ್ಸಾಂಕ, ಪೆರೆರಾ, ಮೆಂಡಿಸ್‌(ನಾಯಕ), ಸಮರವಿಕ್ರಮ, ಅಸಲಂಕ, ಡಿ ಸಿಲ್ವ, ಮ್ಯಾಥ್ಯೂಸ್, ತೀಕ್ಷಣ, ರಜಿತಾ, ಚಮೀರ, ಮಧುಶಂಕ.

ಅಫ್ಘಾನಿಸ್ತಾನ: ಗುರ್ಬಜ್‌, ಜದ್ರಾನ್‌, ರಹ್ಮತ್‌, ಹಶ್ಮತುಲ್ಲಾ(ನಾಯಕ), ಅಜ್ಮತುಲ್ಲಾ, ಇಕ್ರಂ, ನಬಿ, ರಶೀದ್‌, ಮುಜೀಬ್‌, ನವೀನ್‌, ನೂರ್‌ ಅಹ್ಮದ್‌.

ಪಂದ್ಯ: ಮಧ್ಯಾಹ್ನ 2ಕ್ಕೆ
 

Latest Videos
Follow Us:
Download App:
  • android
  • ios