ವಿಶ್ವಕಪ್‌ನ ಅಗ್ರ 7 ತಂಡ ಚಾಂಪಿಯನ್ಸ್‌ ಟ್ರೋಫಿಗೆ ಪ್ರವೇಶ; ಇಂಗ್ಲೆಂಡ್ ತಂಡದ ಪಾಡೇನು?

2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಹತ್ತು ತಂಡಗಳು ಪಾಲ್ಗೊಂಡಿವೆ. ಈ ಪೈಕಿ ಅಕ್ಟೋಬರ್ 29ರ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನುಳಿದಂತೆ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ನೆದರ್‌ಲೆಂಡ್ಸ್ ತಂಡಗಳು ಕ್ರಮವಾಗಿ ಅಗ್ರ 8 ತಂಡಗಳಾಗಿ ಸ್ಥಾನ ಪಡೆದಿವೆ.

Top 7 teams of World Cup to play in Champions Trophy 2025 with host Pakistan kvn

ದುಬೈ(ಅ.30): 2025ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಲ್ಗೊಳ್ಳುವ ತಂಡಗಳ ಬಗ್ಗೆ ಐಸಿಸಿ ಸ್ಪಷ್ಟನೆ ನೀಡಿದ್ದು, ಈ ಬಾರಿ ಏಕದಿನ ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಅಗ್ರ-7 ಸ್ಥಾನ ಪಡೆಯುವ ತಂಡಗಳು ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ ಎಂದು ತಿಳಿಸಿದೆ.

ಟೂರ್ನಿಗೆ ಆತಿಥ್ಯ ವಹಿಸಲಿರುವ ಕಾರಣ ಪಾಕಿಸ್ತಾನ ನೇರವಾಗಿ ಪ್ರವೇಶ ಪಡೆಯಲಿದೆ. ಉಳಿದಂತೆ ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಲೀಗ್‌ ಹಂತದ ಮುಕ್ತಾಯಕ್ಕೆ ಅಗ್ರಸ್ಥಾನ ಪಡೆಯುವ ಇತರ 7 ತಂಡಗಳು ಚಾಂಪಿಯನ್ಸ್‌ ಟ್ರೋಫಿ ಟಿಕೆಟ್‌ ಪಡೆಯಲಿವೆ. ಪಾಕಿಸ್ತಾನ ಅಗ್ರ-7ರಲ್ಲಿ ಸ್ಥಾನ ಪಡೆದರೆ ಆಗ, 8ನೇ ಸ್ಥಾನ ಗಳಿಸುವ ತಂಡಕ್ಕೂ ಅರ್ಹತೆ ಸಿಗಲಿದೆ. ಈ ಬಾರಿಯ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿರುವ ವೆಸ್ಟ್‌ಇಂಡೀಸ್‌, ಐರ್ಲೆಂಡ್‌, ಜಿಂಬಾಬ್ವೆ 2025ರ ಚಾಂಪಿಯನ್ಸ್‌ ಟ್ರೋಫಿಯಲ್ಲೂ ಆಡುವುದಿಲ್ಲ ಎನ್ನುವುದು ಖಚಿತವಾಗಿದೆ.

ಟೂರ್ನಿಯ ಅರ್ಹತಾ ಮಾದರಿ ಬಗ್ಗೆ 2021ರಲ್ಲೇ ನಿರ್ಧಾರವಾಗಿದ್ದರೂ ಹಲವು ತಂಡಗಳಿಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ. ಆದರೆ ನೆದರ್‌ಲೆಂಡ್ಸ್‌ ವಿರುದ್ಧ ಶನಿವಾರ ಬಾಂಗ್ಲಾದೇಶ ಸೋತ ಬಳಿಕ ಬಾಂಗ್ಲಾ ನಾಯಕ ಶಕೀಬ್‌ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ ತಾವು ವಿಶ್ವಕಪ್‌ ಸೆಮಿಫೈನಲ್‌ಗೆ ಅಲ್ಲದಿದ್ದರೂ, ಚಾಂಪಿಯನ್ಸ್‌ ಟ್ರೋಫಿಗಾಗಿ ಅಗ್ರ-8ರಲ್ಲಿ ಸ್ಥಾನ ಗಿಟ್ಟಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದರು. ಹೀಗಾಗಿ ಈ ವಿಷಯದ ಬಗ್ಗೆ ಚರ್ಚೆ ಆರಂಭವಾದ ಹಿನ್ನೆಲೆಯಲ್ಲಿ ಐಸಿಸಿ ಸ್ಪಷ್ಟನೆ ನೀಡಿದೆ.

2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಹತ್ತು ತಂಡಗಳು ಪಾಲ್ಗೊಂಡಿವೆ. ಈ ಪೈಕಿ ಅಕ್ಟೋಬರ್ 29ರ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನುಳಿದಂತೆ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ನೆದರ್‌ಲೆಂಡ್ಸ್ ತಂಡಗಳು ಕ್ರಮವಾಗಿ ಅಗ್ರ 8 ತಂಡಗಳಾಗಿ ಸ್ಥಾನ ಪಡೆದಿವೆ. ಇನ್ನು ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ತಂಡಗಳು ಕ್ರಮವಾಗಿ 9 & 10ನೇ ಸ್ಥಾನ ಪಡೆದಿವೆ.

ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಏನು ಮಾಡಬೇಕು?:

ಇಂಗ್ಲೆಂಡ್‌ ತಂಡವು ಇನ್ನುಳಿದ ಮೂರು ಪಂದ್ಯಗಳ ಪೈಕಿ ಕನಿಷ್ಠ ಎರಡು ಪಂದ್ಯಗಳನ್ನು ಗೆಲ್ಲಲೇಬೇಕು(ಆಸ್ಟ್ರೇಲಿಯಾ, ನೆದರ್‌ಲೆಂಡ್ಸ್ ಹಾಗೂ ಪಾಕ್‌ ವಿರುದ್ದ ಇಂಗ್ಲೆಂಡ್ ಆಡಲಿದೆ).

ಇನ್ನು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ನೆದರ್‌ಲೆಂಡ್ಸ್ ತಂಡವು ತನ್ನ ಪಾಲಿನ ಮೂರೂ ಪಂದ್ಯಗಳನ್ನು ಸೋಲಬೇಕು(ಆಫ್ಘಾನಿಸ್ತಾನ, ಇಂಗ್ಲೆಂಡ್ & ಭಾರತ ವಿರುದ್ದ ನೆದರ್‌ಲೆಂಡ್ಸ್ ಆಡಲಿದೆ)

ಇನ್ನು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ತಂಡವು ಇನ್ನುಳಿದ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡು ಪಂದ್ಯಗಳನ್ನು ಸೋಲಬೇಕು(ಬಾಂಗ್ಲಾದೇಶ ತಂಡವು ಪಾಕಿಸ್ತಾನ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ದ ಆಡಲಿದೆ)
 

Latest Videos
Follow Us:
Download App:
  • android
  • ios