ಪ್ಯಾರಿಸ್ ಒಲಿಂಪಿಕ್ಸ್‌ ಕಣದಲ್ಲಿ ಐವರು ಆಳ್ವಾಸ್ ಹಳೆಯ ವಿದ್ಯಾರ್ಥಿಗಳು!

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಶಿಕ್ಷಣ ಯೋಜನೆಯಲ್ಲಿ ಶಿಕ್ಷಣ ಪೂರೈಸಿರುವ ಐವರು ಹಿರಿಯ ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. 4*400 ರಿಲೇಯ ಭಾರತ ತಂಡದಲ್ಲಿ ಪೂವಮ್ಮ ರಾಜು, ಸಂತೋಷ್ ಕುಮಾರ್ ತಮಿಳರಸನ್, ಸುಭಾ ವೆಂಕಟೇಶನ್, ಮತ್ತು ಮಿಜೋ ಚಾಕೋ ಕುರಿಯನ್ ಭಾಗವಹಿಸಿದರೆ, ಪ್ರವೀಣ್‌ ಸಿ ಟ್ರಿಪಲ್ ಜಂಪ್‌ನಲ್ಲಿ ಪಾಲ್ಗೊಂಡಿದ್ದಾರೆ.

Machettira Raju Poovamma to Mijo Chacko Kurian 5 Alvas Former Students participate in Paris Olympics 2024 kvn

ಮೂಡುಬಿದಿರೆ: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಶುಕ್ರವಾರ ಆರಂಭವಾಗಲಿರುವ ಒಲಿಂಪಿಕ್ಸ್ ಗೇಮ್ಸ್ ನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಶಿಕ್ಷಣ ಯೋಜನೆಯಲ್ಲಿ ಶಿಕ್ಷಣ ಪೂರೈಸಿರುವ ಐವರು ಹಿರಿಯ ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. 4*400 ರಿಲೇಯ ಭಾರತ ತಂಡದಲ್ಲಿ ಪೂವಮ್ಮ ರಾಜು, ಸಂತೋಷ್ ಕುಮಾರ್ ತಮಿಳರಸನ್, ಸುಭಾ ವೆಂಕಟೇಶನ್, ಮತ್ತು ಮಿಜೋ ಚಾಕೋ ಕುರಿಯನ್ ಭಾಗವಹಿಸಿದರೆ, ಪ್ರವೀಣ್‌ ಸಿ ಟ್ರಿಪಲ್ ಜಂಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

2016ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಸದಸ್ಯರಾಗಿದ್ದ ಕರ್ನಾಟಕ ಮೂಲದ ಪೂವಮ್ಮ ರಾಜು ಈ ಬಾರಿ ಮತ್ತೆ ಕಣದಲ್ಲಿದ್ದಾರೆ. ಇದರೊಂದಿಗೆ ಈ ವರೆಗೆ ಆಳ್ವಾಸ್ ಮೂಲದ 11 ಕ್ರೀಡಾಪಟುಗಳು ವಿವಿಧ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ದಾಖಲೆ ನಿರ್ಮಾಣವಾಗಿದೆ. ರಾಜ್ಯದ ಒಂದು ಸಂಸ್ಥೆಯಿಂದ ಅತೀ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿರುವ ಹಿರಿಮೆಗೂ ಆಳ್ವಾಸ್ ಪಾತ್ರವಾಗುತ್ತಿದೆ.

ನಾಲ್ಕು ದಶಕದ ತಪಸ್ಸು!: 1984 ರಿಂದ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾ ಬಂದ ಡಾ ಮೋಹನ್ ಆಳ್ವ, ಕ್ರೀಡಾ ಪ್ರತಿಭೆಗಳಿಗೆ ಉಚಿತ ಶಿಕ್ಷಣದ ಅವಕಾಶವನ್ನೂ ನಂತರ ಪ್ರಾರಂಭಿಸಿದ್ದರು. ಅಸಂಖ್ಯಾತ ಕ್ರೀಡಾ ಪ್ರತಿಭೆಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ನಿರಂತರ ಎಂಬಂತೆ ಗೆಲವು, ದಾಖಲೆಗಳು, ಪ್ರಶಸ್ತಿಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಒಲಿಂಪಿಕ್ಸ್ ಅಂಗಣಕ್ಕೂ ಆಳ್ವಾಸ್ ಪ್ರತಿಭೆಗಳು ಕಾಲಿರಿಸಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌: ಭಾರತಕ್ಕೆ ಇಂದೇ ಸಿಗುತ್ತಾ ಮೊದಲ ಪದಕ?

ಪೂವಮ್ಮ ರಾಜು (4*400 ರಿಲೇ):

2016 ರ ಒಲಿಂಪಿಕ್ಸಿನಲ್ಲಿ ಭಾರತ ತಂಡದಲ್ಲಿದ್ದ ಪೂವಮ್ಮ ರಾಜು 2014 ಮತ್ತು 2018 ರ ಏಷ್ಯನ್ ಗೇಮ್ಸ್ ಮತ್ತು 2013 ಮತ್ತು 2017ರ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ವಿಜೇತರು. ಪೂವಮ್ಮ ರಾಜು ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, 2012ರ ಅಖಿಲ ಭಾರತ ವಿಶ್ವವಿದ್ಯಾಲಯದ ಅಥ್ಲೇಟಿಕ್ಸ್ ಕ್ರೀಡಾ ಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ 400 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.

ಸಂತೋಷ್ ತಮಿಳರಸನ್ (4*400 ಮೀ ರಿಲೇ):

2017ರಲ್ಲಿ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿದ್ದ ಸಂತೋಷ್ ತಮಿಳರಸನ್, ಗುಂಟೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 400 ಮೀಟರ್ಸ್ ಹರ್ಡಲ್ಸ್ ಮತ್ತು 400 ಮೀಟರ್ಸ್ ರಿಲೇಯಲ್ಲಿ ಮಂಗಳೂರು ವಿವಿಗೆ ಚಿನ್ನದ ಪದಕ ತಂದುಕೊಟ್ಟಿದ್ದರು. 2017ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 400 ಹರ್ಡಲ್ಸಿನಲ್ಲಿ ಭಾರತೀಯ ತಂಡದಲ್ಲಿದ್ದರು.

Paris Olympics 2024: ಈ 7 ಕ್ರೀಡೆಗಳಲ್ಲಿ ಭಾರತಕ್ಕೆ ಇದೆ ಪದಕ ಭರವಸೆ..!

ಸುಭಾ ವೆಂಕಟೇಶನ್ (4*400 ಮೀ ರಿಲೇ):

ತಮಿಳುನಾಡು ತಿರುಚಿರಾಪಳ್ಳಿಯ ಸುಭಾ ವೆಂಕಟೇಶನ್ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 4*400 ರಿಲೇಯಲ್ಲಿ ಭಾರತೀಯ ತಂಡದಲ್ಲಿದ್ದರು. 2022ರ ಏಷ್ಯನ್ ಗೇಮ್ಸಿನಲ್ಲಿ 4*400 ಮೀಟರ್ಸ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2017ರಲ್ಲಿ ಆಳ್ವಾಸ್ ಪದವಿ ವಿದ್ಯಾರ್ಥಿನಿಯಾಗಿದ್ದ ಸುಭಾ ವೆಂಕಟೇಶನ್, 2019 ರಲ್ಲಿ ಗುಂಟೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 400 ಮೀ ಓಟ ಮತ್ತು 4*400 ಮೀ ರಿಲೇಯಲ್ಲಿ ಮಂಗಳೂರು ವಿವಿಗೆ ಚಿನ್ನದ ಪದಕ ತಂದಿದ್ದರು.

ಮಿಜೋ ಚಾಕೋ ಕುರಿಯನ್ (4*400 ಮೀ ರಿಲೇ):

ಕೇರಳ ಮೂಲದ ಮಿಜೋ ಚಾಕೋ ಕುರಿಯನ್, 2022ರ ಏಷ್ಯನ್ ಗೇಮ್ಸ್ನಲ್ಲಿ 4*400 ರಿಲೇ ತಂಡದ ಸದಸ್ಯ. 2016ರಲ್ಲಿ ಆಳ್ವಾಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿ ಅಖಿಲ ಭಾರತ ಅಂತರ್ ವಿವಿ ಕ್ರೀಡಾಕೂಟದಲ್ಲಿ 800ಮೀ ಮತ್ತು 400 ಮೀ ಓಟದಲ್ಲಿ ಪದಕ ವಿಜೇತರಾಗಿದ್ದರು. ಪ್ರಸ್ತುತ ವಾಯುಪಡೆಯಲ್ಲಿ ಉದ್ಯೋಗಿ.

ಪ್ರವೀಣ್ ಚಿತ್ರವೇಲ್ (ಟ್ರಿಪಲ್ ಜಂಪ್)ತಮಿಳುನಾಡಿನ ಚಿತ್ರವೇಲ್ ಟ್ರಿಪಲ್ ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. 2018 ಯೂತ್ ಒಲಿಂಪಿಕ್ಸ್, 2022 ಕಾಮನ್‌ವೆಲ್ತ್ ಗೇಮ್ಸ್, 2022ರ ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪ್ರವೀಣ್, ತಮ್ಮ ವೃತ್ತಿಜೀವನದಲ್ಲಿ ಉನ್ನತ ಸಾಧನೆಯ ಅರ್ಹತೆಯಿಂದ ಪ್ಯಾರಿಸ್ ಒಲಿಂಪಿಕ್ಸ್ ಕಣದಲ್ಲಿದ್ದಾರೆ.

ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಶುಭ ಹಾರೈಸಿದ್ದಾರೆ.
 

Latest Videos
Follow Us:
Download App:
  • android
  • ios