ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ನಡೆದ ಸ್ವಾರಸ್ಯ ಘಟನೆ ಅಭಿಮಾನಿಗಳಿಗೆ ಮಾತ್ರವಲ್ಲ, ಆಟಗಾರರಿಗೂ ನಗು ತರಿಸಿದೆ. ರೋಚಕ ಪಂದ್ಯದ ನಡುವೆ ನಡೆದ ಘಟನೆ ಏನು? ಇಲ್ಲಿದೆ ವಿವರ.
ಬೆಂಗಳೂರು(ಏ.25): 12ನೇ ಆವೃತ್ತಿ ಐಪಿಎಲ್ ಟೂರ್ನಿ ಹಲವು ಸ್ವಾರಸ್ಯಕರ ಘಟನೆಗಳಿಗೂ ಸಾಕ್ಷಿಯಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ಇದೇ ರೀತಿ ಘಟನೆಗೆ ಸಾಕ್ಷಿಯಾಗಿದೆ. ಪಂದ್ಯದ ನಡುವೆ ಬಾಲ್‌ಗಾಗಿ ಪಂಜಾಬ್ ಹಾಗೂ RCB ಆಟಗಾರರು ಮೈದಾನವನ್ನೇ ಹುಡುಕಿದ ಘಟನೆ ನಡೆದಿದೆ.
ಇದನ್ನೂ ಓದಿ: RCB ಹ್ಯಾಟ್ರಿಕ್ ಗೆಲುವನ್ನು ಸಂಭ್ರಮಿಸಿದ ಸಂಚುರಿ ಸ್ಟಾರ್!
RCB ಬ್ಯಾಟಿಂಗ್ ವೇಳೆ 14ನೇ ಓವರ್ ಮುಕ್ತಾಯಕ್ಕೆ ಟೈಮ್ ಔಟ್ ನೀಡಲಾಗಿತ್ತು. ಸ್ಟ್ರಾಟಜಿಕ್ ವಿರಾಮದ ಬಳಿಕ ಪಂದ್ಯ ಆರಂಭಗೊಂಡಾಗ ಅಂಕಿತ್ ರಜಪೂತ್ ಬೌಲಿಂಗ್ ಮಾಡಲು ಸಜ್ಜಾಗಿದ್ದರು. ಆದರೆ ರಜಪೂತ್ ಬಳಿ ಬಾಲ್ ಇರಲಿಲ್ಲ. ಬಾಲ್ ನೀಡಲು ಕೇಳಿಕೊಂಡಾಗಲೇ, ಬಾಲ್ ಕಾಣೆಯಾಗಿದೆ ಅನ್ನೋದು ತಿಳಿದಿದೆ. ಪಂಜಾಬ್ ಆಟಗಾರರೆಲ್ಲಾ ಮೈದಾನ ಹುಡುಕಾಡಿದರು. ಅಶ್ವಿನ್ ಅಂಪೈರ್ ಜೊತೆ ಬಾಲ್ ಕಾಣೆಯಾಗಿರುವುದರ ಕುರಿತು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಉಮೇಶ್ ಯಾದವ್ ಲಾಸ್ಟ್ ಓವರ್- ಇಲಿದೆ ಟ್ವಿಟರ್ ಪ್ರತಿಕ್ರಿಯೆ!
ಹುಡುಕಾಟದ ಬಳಿ ಬಾಲ್ ಸಿಗದಿದ್ದಾಗ, ಬೇರೆ ಬಾಲ್ ತರಿಸಲು ಅಂಪೈರ್ ಶಂಶುದ್ದಿನ್ ಸೂಚಿಸಿದರು. ಹೊಸ ಬಾಲ್ ಕ್ರೀಡಾಂಣಕ್ಕೆ ಬರುತ್ತಿದ್ದಂತೆ ಶಂಶುದ್ದೀನ್‌ಗೆ ತಕ್ಷಣ ಬಾಲ್ ತನ್ನ ಜೇಬಿನಲ್ಲಿರುವುದು ನೆನಪಾಗಿದೆ. ಜೇಬಿನಿಂದ ಬಾಲ್ ತೆಗೆದು ಅಂಕಿತ್ ರಜಪೂತ್‌ಗೆ ನೀಡುತ್ತಿದ್ದಂತೆ ಆಟಗಾರರಿಗೆ ನಗು ತಡೆಯಲು ಸಾಧ್ಯವಾಗಿಲಿಲ್ಲ. ಬಳಿಕ ಆಟ ಮುಂದುವರೆಯಿತು.
