RCB ಲಾಸ್ಟ್ ಓವರ್ ರನ್ ಬಿಟ್ಟುಕೊಟ್ಟಿದ್ದೇ ಹೆಚ್ಚು . ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಉಮೇಶ್ ಯಾದವ್ ರನ್‌ಗಿಂತ ಹೆಚ್ಚು ವಿಕೆಟ್ ಕಬಳಿಸಿ ಅದ್ಬುತ ಪ್ರದರ್ಶನ ನೀಡಿದೆ. ಉಮೇಶ್ ಯಾದವ್ ಎಸೆತದ ಈ ಅಂತಿಮ ಓವರ್‌ಗೆ ಟ್ವಿಟರ್ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ
ಬೆಂಗಳೂರು(ಏ.25): ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 17 ರನ್ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಆಸೆ ಜೀವಂತವಾಗಿರಿಸಿದೆ. ಈ ಪಂದ್ಯದ ಅಂತಿಮ ಓವರ್‌ನಲ್ಲಿ ಬೆಂಗಳೂರು ಗೆಲುವಿನ ದಡ ಸೇರಿತು. ಪಂಜಾಬ್ ಗೆಲುವಿಗೆ ಅಂತಿಮ ಓವರ್‌ನಲ್ಲಿ 27 ರನ್ ಬೇಕಿತ್ತು. ಉಮೇಶ್ ಯಾದವ್ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಅಂತಿಮ ಓವರ್‌ನಲ್ಲಿ ಕೇವಲ 9 ರನ್ ನೀಡಿ RCB ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಉಮೇಶ್ ಯಾದವ್ ಅಂತಿಮ ಓವರ್‌ನಲ್ಲಿ ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ್ದಾರೆ. ಈ ಗೆಲುವಿನ ಬಳಿಕ ಉಮೇಶ್ ಯಾದವ್ ಅಂತಿಮ ಓವರ್ ಕುರಿತು ಹಲವರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
