Asianet Suvarna News Asianet Suvarna News

ಬೆಂಗ್ಳೂರು 10ಕೆ: ಕೀನ್ಯಾದ ಪೀಟರ್ ಎಂವಾನಿಕಿ ಚಾಂಪಿಯನ್

ಭಾನುವಾರ ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಪರೇಡ್ ಕ್ರೀಡಾಂಗಣ ಹಾಗೂ ಸುತ್ತಮುತ್ತ ಮಾರ್ಗಗಳಲ್ಲಿ ರೇಸ್ ನಡೆಯಿತು. ಆರಂಭದಲ್ಲೇ ಇತರ ಸ್ಪರ್ಧಿಗಳಿಂದ ಅಂತರ ಕಾಯ್ದುಕೊಂಡಿದ್ದ ಪೀಟರ್, 28.15 ನಿಮಿಷಗಳಲ್ಲಿ ಗುರಿ ತಲುಪಿ ಅಗ್ರಸ್ಥಾನಿಯಾದರು. ಕೀನ್ಯಾದಹಿಲರಿ ಚೆಟ್‌ನಿ(28.33 ನಿಮಿಷ), ಎಥಿಯೋಪಿಯಾದ ಹಾಗೊ (28.39 ನಿ.) ಕ್ರಮವಾಗಿ 2, 3ನೇ ಸ್ಥಾನ ಪಡೆದರು.

Lilian Kasait and Peter Mwaniki reign supreme at the TCS World 10K Bengaluru 2024 kvn
Author
First Published Apr 29, 2024, 9:21 AM IST

ಬೆಂಗಳೂರು: 16ನೇ ಆವೃತ್ತಿಯ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ ಕೀನ್ಯಾದ ಪೀಟರ್ ಎಂವಾನಿಕಿ ಹಾಗೂ ಲಿಲಿಯಾನ್ ಕಸಾಯಟ್ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಚಾಂಪಿಯನ್ ఆగి ಹೊರಹೊಮ್ಮಿದ್ದಾರೆ.

ಭಾನುವಾರ ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಪರೇಡ್ ಕ್ರೀಡಾಂಗಣ ಹಾಗೂ ಸುತ್ತಮುತ್ತ ಮಾರ್ಗಗಳಲ್ಲಿ ರೇಸ್ ನಡೆಯಿತು. ಆರಂಭದಲ್ಲೇ ಇತರ ಸ್ಪರ್ಧಿಗಳಿಂದ ಅಂತರ ಕಾಯ್ದುಕೊಂಡಿದ್ದ ಪೀಟರ್, 28.15 ನಿಮಿಷಗಳಲ್ಲಿ ಗುರಿ ತಲುಪಿ ಅಗ್ರಸ್ಥಾನಿಯಾದರು. ಕೀನ್ಯಾದಹಿಲರಿ ಚೆಟ್‌ನಿ(28.33 ನಿಮಿಷ), ಎಥಿಯೋಪಿಯಾದ ಹಾಗೊ (28.39 ನಿ.) ಕ್ರಮವಾಗಿ 2, 3ನೇ ಸ್ಥಾನ ಪಡೆದರು. 

ಮಹಿಳಾ ವಿಭಾಗದಲ್ಲಿ ಲಿಲಿಯಾನ್ 30.56 ನಿಮಿಷಗಳಲ್ಲಿ ಕ್ರಮಿಸಿದರೆ, ಕೀನ್ಯಾದ ಎಮ್ಯಾಕುಲೇಟ್ (31.17 ನಿ.) ದ್ವಿತೀಯ, ಎಥಿಯೋಪಿಯಾದ ಲೆಮ್ಮೆಮ್ ಹೈಲು(31.23 ನಿ.) 3ನೇ ಸ್ಥಾನ ಪಡೆದರು. ಪದಕ ವಿಜೇತರಿಗೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್, ಮಾಜಿ ಅಥೇಟ್ ಅಂಜು ಬಾಬಿ ಜಾರ್ಜ್, ರೇಸ್‌ನ ರಾಯಭಾರಿ, ನ್ಯೂಜಿಲೆಂಡ್‌ನ ದಿಗ್ಗಜ ಶಾಟ್ ಪುಟ್ ಪಟು ವೆಲೇರಿ ಆಡಮ್ಸ್ ಸೇರಿದಂತೆ ಗಣ್ಯರು ಪ್ರಶಸ್ತಿ, ನಗದು ವಿತರಿಸಿದರು.

ಐಸಿಸಿ ಟಿ20 ವಿಶ್ವಕಪ್ ಟೂರ್ನಿ: ಭಾರತ ತಂಡ ಆಯ್ಕೆಗೆ ಅಗರ್‌ಕರ್-ರೋಹಿತ್ ಬಿಸಿಬಿಸಿ ಚರ್ಚೆ..! ರೇಸ್‌ನಲ್ಲಿ ಸಂಜು, ಚಹಲ್

96 ವರ್ಷದ ದತ್ತಾತ್ರೇಯ ಸೇರಿ 28000+ ಓಟಗಾರರು ಭಾಗಿ!

ವಿಶ್ವ ಹಾಗೂ ಭಾರತೀಯ ಎಲೈಟ್ ಅಫೀಟ್‌ಗಳ ಜೊತೆಗೆ ಮುಕ್ತ ವಿಭಾಗದ 10ಕೆ ಓಟದ ಸ್ಪರ್ಧೆಯೂ ನಡೆಯಿತು. ಮಜಾ ರನ್ (5.5 ಕಿ. ಮೀ), ಸಿಲ್ವರ್‌ರನ್ (2.6 ಕಿ.ಮೀ.) ಹಾಗೂ ವಿಶೇಷ ಚೇತನ (2.6 ಕಿ. ಮೀ) ವಿಭಾಗಗಳ ರೇಸ್ ಪ್ರಮುಖ ಆಕರ್ಷಣೆ ಎನಿಸಿಕೊಂಡಿತು. ಅದರಲ್ಲೂ 96 ವರ್ಷದ ಎನ್.ಎಸ್.ದತ್ತಾತ್ರೇಯ 10 ಕಿ.ಮೀ. ಓಟ ಪೂರ್ಣಗೊಳಿಸಿ ಗಮನ ಸೆಳೆದರು. ಮುಕ್ತ ವಿಭಾಗದ 18,433 ಸೇರಿ ಎಲ್ಲಾ ವಿಭಾಗಗಳಲ್ಲಿ 28,600ರಷ್ಟು ಓಟಗಾರರು ಪಾಲ್ಗೊಂಡರು.

ಕಿರಣ್, ಸಂಜೀವನಿಗೆ ಸ್ವರ್ಣ

ಭಾರತದ ಎಲೈಟ್ ಅಫೀಟ್‌ಗಳ ಪೈಕಿ ಕಿರಣ್ ಮಾತ್ರೆ, ಸಂಜೀವನಿ ಕ್ರಮವಾಗಿ ಪುರುಷ, ಮಹಿಳಾ ವಿಭಾಗಗಳಲ್ಲಿ ಚಿನ್ನ ತಮ್ಮದಾಗಿಸಿಕೊಂಡರು. ಕಿರಣ್ 29.32 ನಿಮಿಷ ಗಳಲ್ಲಿ ಕ್ರಮಿಸಿದರೆ, ರಂಜೀತ್ ಪಟೇಲ್ (29.35 ನಿ.), ಧರ್ಮೇಂದ್ರ (29.45 ನಿ.) ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಿಟ್ಟಿಸಿಕೊಂಡರು. ಮಹಿಳಾ ವಿಭಾಗದಲ್ಲಿ ಸಂಜೀವನಿ 34.03 ನಿಮಿಷದಲ್ಲಿ ಗುರಿ ಮುಟ್ಟಿದರು. ಅಲ್ಲಿ ದಾಸ್ (34.13 ನಿಮಿಷ), ಶ್ರೀನು ಯಾದವ್ (34.24 ನಿಮಿಷ) ಕ್ರಮವಾಗಿ ಬೆಳ್ಳಿ, ಕಂಚು ಗೆದ್ದುಕೊಂಡರು.

Latest Videos
Follow Us:
Download App:
  • android
  • ios