ನವದೆಹಲಿ(ಮೇ.08]: ಭಾರತದ ದಿಗ್ಗಜ ಟೆನಿಸ್ ಆಟಗಾರ ಲಿಯಾಂಡರ್ ಪೇಸ್, 2040ರ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್‌'ನಲ್ಲಿ ವಿಶ್ವದ ಮಾಜಿ ನಂ.1 ಟೆನಿಸ್ ತಾರೆ ಅಮೆರಿಕದ ಸೆರೆನಾ ವಿಲಿಯಮ್ಸ್ ಮಗಳೊಂದಿಗೆ ಮಿಶ್ರ ಡಬಲ್ಸ್‌'ನಲ್ಲಿ ಆಡಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. 

‘ಸೆರೆನಾ ನಾನು 2040ರ ವಿಂಬಲ್ಡನ್‌'ನಲ್ಲಿ ಮಿಶ್ರ ಡಬಲ್ಸ್‌'ನಲ್ಲಿ ನನ್ನ ಜತೆ ಆಡಬಲ್ಲ ಆಟಗಾರ್ತಿಗಾಗಿ ಎದುರು ನೋಡುತ್ತಿದ್ದೇನೆ. ನಿಮ್ಮ ಮಗಳು ಅಲೆಕ್ಸಿಸ್ ಆ ವೇಳೆಗೆ ಸಿದ್ಧಳಿರುತ್ತಾಳೆ ಎಂದುಕೊಂಡಿದ್ದೇನೆ ’ಎಂದು ಪೇಸ್ ಹೇಳಿದ್ದಾರೆ. 

2017ರ ಸೆಪ್ಟೆಂಬರ್ 1ರಂದು ಸೆರನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸೆರೆನಾ ವಿಲಯಮ್ಸನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 23  ಹಾಗೂ 2 ಮಿಶ್ರ ಡಬಲ್ಸ್’ನಲ್ಲಿ ಗ್ರಾಂಡ್’ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಕೋಲ್ಕತ ಮೂಲದ ಲಿಯಾಂಡರ್ ಪೇಸ್ ಇತ್ತೀಚೆಗಷ್ಟೇ ಡೇವಿಸ್ ಕಪ್ ಟೂರ್ನಿಯಲ್ಲಿ ಚೀನಾ ವಿರುದ್ಧ ಗೆಲುವು ಸಾಧಿಸುವ ಮೂಲಕ, ಈ ಟೂರ್ನಿಯಲ್ಲಿ ಅತಿಹೆಚ್ಚು ಗೆಲುವು[43] ಪಡೆದ ವಿಶ್ವದ ಮೊದಲ ಟೆನಿಸ್ ಆಟಗಾರ ಎನ್ನುವ ವಿಶ್ವದಾಖಲೆ ನಿರ್ಮಿಸಿದ್ದರು.