ಇತ್ತೀಚಿನ ದಿನಗಳಲ್ಲಿ ಕುಲ್ದೀಪ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದರ ಯಶಸ್ಸು ಅನಿಲ್ ಕುಂಬ್ಳೆಗೆ ಸಲ್ಲಬೇಕು ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ(ಅ.13): ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಮಿಂಚುತ್ತಿರುವ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ ಯಶಸ್ಸಿನ ಹಿಂದೆ ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆಯ ಪರಿಶ್ರಮವಿದೆ ಎಂದು ಸುರೇಶ್ ರೈನಾ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿನ ದಿನಗಳಲ್ಲಿ ಕುಲ್ದೀಪ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದರ ಯಶಸ್ಸು ಅನಿಲ್ ಕುಂಬ್ಳೆಗೆ ಸಲ್ಲಬೇಕು ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

ನಾನು ಐಪಿಎಲ್ ವೇಳೆ ಕುಲ್ದೀಪ್ ಅವರೊಂದಿಗೆ ಮಾತನಾಡುತ್ತಿದೆ. ಆಗ ಅನಿಲ್ ಕುಂಬ್ಳೆಯ ಜೊತೆ ಕುಲ್ದೀಪ್ ಸಲಹೆ ಪಡೆಯುತ್ತಿದ್ದರು. ಕುಂಬ್ಳೆಯ ಸಲಹೆಯನ್ನು ಫಾಲೋ ಮಾಡುತ್ತಿದ್ದರಿಂದಲೇ ಇಂದು ಕುಲ್ದೀಪ್ ಯಶಸ್ವಿಯಾಗಲು ಸಾಧ್ಯವಾಗಿದ್ದು ಎಂದು ರೈನಾ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್'ನಲ್ಲಿ ಪಾದಾರ್ಪಣಾ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ತೋರಿದ್ದ ಕುಲ್ದೀಪ್, ಇತ್ತೀಚೆಗಷ್ಟೇ ಮುಕ್ತಾಯವಾದ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕೀಳುವ ಮೂಲಕ ಈ ಸಾಧನೆ ಮಾಡಿದ 3ನೇ ಟೀಂ ಇಂಡಿಯಾ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಚೈನಾಮ್ಯಾನ್ ಖ್ಯಾತಿಯ ಕುಲ್ದೀಪ್ ಪಾತ್ರವಾಗಿದ್ದಾರೆ