ಮೈಸೂರಿನಲ್ಲಿ ನಡೆಯುತ್ತಿರುವ ಕೆಪಿಎಲ್ ಟೂರ್ನಿ ಇದೀಗ ರೋಚಕ ಘಟ್ಟ ತಲುಪಿದೆ. ಶಿವಮಗ್ಗ ಲಯನ್ಸ್ ಹಾಗೂ ಬಿಜಾಪರು ಬುಲ್ಸ್ ನಡುವಿನ ಪಂದ್ಯ ಅಭಿಮಾನಿಗಳ ಎದಬಡಿತ ಹೆಚ್ಚಿಸಿತ್ತು. ಇಲ್ಲಿದೆ ಈ ರೋಚಕ ಪಂದ್ಯದ ಹೈಲೈಟ್ಸ್.

ಮೈಸೂರು(ಸೆ.02): ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ 19ನೇ ಲೀಗ್ ಪಂದ್ಯ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು. ಶಿವಮೊಗ್ಗ ಲಯನ್ಸ್ ವಿರುದ್ಧ ಹೋರಾಡಿದ ಬಿಜಾಪುರ ಬುಲ್ಸ್ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಲಯನ್ಸ್ 9 ವಿಕೆಟ್ ನಷ್ಟಕ್ಕೆ 140 ರನ್ ಪೇರಿಸಿತತು. ಅಶೋಕ್ ಹೆಗ್ಡೆ 42 ಹಾಗೂ ಆದಿತ್ಯ ಸೋಮಣ್ಣ 37 ರನ್ ಕಾಣಿಕೆ ನೀಡಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

141 ರನ್ ಗುರಿ ಬೆನ್ನಟ್ಟಿದ ಬಿಜಾಪುರ ಬುಲ್ಸ್, ದಿಟ್ಟ ಹೋರಾಟ ನೀಡಿತು. ನಾಯಕ ಭರತ್ ಚಿಪ್ಲಿ 43 ಹಾಗೂ ಕೊನೈನ ಅಬ್ಬಾಸ್ 51 ರನ್ ಸಿಡಿಸಿದರು. ಸುನೀಲ್ ರಾಜು ಅಜೇಯ 18 ರನ್ ಸಿಡಿಸೋ ಮೂಲಕ ಬಿಜಾಪುರ 19.5 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.