Asianet Suvarna News Asianet Suvarna News

ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದ ಟೀಂ ಇಂಡಿಯಾ

ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಶಿಖರ್ ಧವನ್ ಹಾಗೂ ಚೇತೇಶ್ವರ ಪೂಜಾರ ತಲಾ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

Kohli Vijay slam centuries

ನವದೆಹಲಿ(ಡಿ.02): ನಾಯಕ ವಿರಾಟ್ ಕೊಹ್ಲಿ(156*) ಹಾಗೂ ಮುರುಳಿ ವಿಜಯ್(155) ಭರ್ಜರಿ ದ್ವಿಶತಕದ ಜತೆಯಾಟದ ನೆರವಿನಿಂದ ಮೊದಲ ದಿನವೇ 4 ವಿಕೆಟ್ ನಷ್ಟಕ್ಕೆ 371 ರನ್ ಕಲೆಹಾಕಿದ್ದು ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.

ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಶಿಖರ್ ಧವನ್ ಹಾಗೂ ಚೇತೇಶ್ವರ ಪೂಜಾರ ತಲಾ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ತಂಡದ ಮೊತ್ತ 78/2. ಈ ವೇಳೆ ಜತೆಯಾದ ಮುರುಳಿ ವಿಜಯ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾದರು. ಚಹಾ ವಿರಾಮಕ್ಕೂ ಮುನ್ನ ವಿಜಯ್ ಟೆಸ್ಟ್ ಕ್ರಿಕೆಟ್'ನಲ್ಲಿ 11ನೇ ಶತಕ ಸಿಡಿಸಿ ಸಂಭ್ರಮಿಸಿದರು. ಇನ್ನು ರನ್ ಮಷೀನ್ ವಿರಾಟ್ ಕೊಹ್ಲಿ ಕೂಡಾ ಟೆಸ್ಟ್ ಕ್ರಿಕೆಟ್'ನಲ್ಲಿ 20ನೇ ಶತಕ ಬಾರಿಸಿ ಮಿಂಚಿದರು. ಅಧ್ಬುತ ಫಾರ್ಮ್'ನಲ್ಲಿರುವ ಕೊಹ್ಲಿ ಹ್ಯಾಟ್ರಿಕ್ ಶತಕ ಬಾರಿಸುವ ಮೂಲಕ ತವರಿನ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದರು. 155 ರನ್ ಬಾರಿಸಿ ಮುನ್ನುಗ್ಗುತ್ತಿದ್ದ ವಿಜಯ್ ಸ್ಟಂಪ್ ಔಟ್ ಆಗಿ ಪೆವಿಲಿಯನ್ ಸೇರಿದರು. ಆ ವೇಳೆಗಾಗಲೇ ಟೀಂ ಇಂಡಿಯಾ 350ರ ಗಡಿ ದಾಟಿತ್ತು. ಇದರ ಬೆನ್ನಲ್ಲೇ ರಹಾನೆ(01) ಕೂಡಾ ಸ್ಟಂಪ್ ಔಟ್ ಆಗಿ ನಿರಾಸೆ ಅನುಭವಿಸಿದರು. ದಿನದಂತ್ಯಕ್ಕೆ ಕೊಹ್ಲಿ(156*) ಹಾಗೂ ರೋಹಿತ್ ಶರ್ಮಾ(06*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಲಂಕಾ ಪರ ಸಂದಕನ್ 2 ವಿಕೆಟ್ ಪಡೆದರೆ, ಗಮಾಗೆ ಹಾಗೂ ಪೆರೇರಾ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಭಾರತ: 371/4

ವಿರಾಟ್ ಕೊಹ್ಲಿ: 156*

ಮುರುಳಿ ವಿಜಯ್: 155

ಸಂದಕನ್: 110/2

(ಮೊದಲ ದಿನದಾಟ ಮುಕ್ತಾಯಕ್ಕೆ)

Follow Us:
Download App:
  • android
  • ios