Asianet Suvarna News Asianet Suvarna News

ಸಚಿನ್ ಮತ್ತೊಂದು ದಾಖಲೆ ಅಳಿಸಿ ಹಾಕಿದ ಕೊಹ್ಲಿ..!

ಪಂದ್ಯಕ್ಕೂ ಮುನ್ನ 880 ರೇಟಿಂಗ್ ಅಂಕ ಹೊಂದಿದ್ದ ವಿರಾಟ್, 20 ಅಂಕ ಏರಿಕೆ ಕಂಡು ತಮ್ಮ ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ 900 ಅಂಕ ತಲುಪಿದ್ದಾರೆ. ಇದರೊಂದಿಗೆ ಸಚಿನ್ ತೆಂಡುಲ್ಕರ್‌ (898), ರಾಹುಲ್ ದ್ರಾವಿಡ್(892) ಸಾರ್ವಕಾಲಿಕ ರೇಟಿಂಗ್ ಅಂಕಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ.

Kohli tops Tendulkar in Test rankings

ದುಬೈ(ಜ.19) ಸೆಂಚೂರಿಯನ್‌ನಲ್ಲಿ ಭರ್ಜರಿ ಶತಕ ಸಿಡಿಸಿದ ವಿರಾಟ್, ಐಸಿಸಿ ಟೆಸ್ಟ್ ಬ್ಯಾಟ್ಸ್‌'ಮನ್‌'ಗಳ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಈ ಪಂದ್ಯಕ್ಕೂ ಮುನ್ನ 880 ರೇಟಿಂಗ್ ಅಂಕ ಹೊಂದಿದ್ದ ವಿರಾಟ್, 20 ಅಂಕ ಏರಿಕೆ ಕಂಡು ತಮ್ಮ ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ 900 ಅಂಕ ತಲುಪಿದ್ದಾರೆ. ಇದರೊಂದಿಗೆ ಸಚಿನ್ ತೆಂಡುಲ್ಕರ್‌ (898), ರಾಹುಲ್ ದ್ರಾವಿಡ್(892) ಸಾರ್ವಕಾಲಿಕ ರೇಟಿಂಗ್ ಅಂಕಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಸುನಿಲ್ ಗವಾಸ್ಕರ್ (1979ರಲ್ಲಿ 916 ಅಂಕ) ಬಳಿಕ 900 ಅಂಕ ತಲುಪಿದ ಭಾರತೀಯ ಎನ್ನುವ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಇದರೊಂದಿಗೆ 900 ಅಂಕ ತಲುಪಿದ ವಿಶ್ವದ 31ನೇ ಬ್ಯಾಟ್ಸ್‌'ಮನ್ ಎಂಬ ಕೀರ್ತಿಗೂ ವಿರಾಟ್ ಪಾತ್ರರಾಗಿದ್ದಾರೆ.

961 ಅಂಕ ಗಳಿಸಿದ್ದ ಆಸ್ಟ್ರೇಲಿಯಾದ ದಿಗ್ಗಜ ಡಾನ್ ಬ್ರಾಡ್ಮನ್ ಇಂದಿಗೂ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 947 ಅಂಕ ಗಳಿಕೆಯೊಂದಿಗೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ 2ನೇ ಸ್ಥಾನ ಪಡೆದುಕೊಂಡಿದ್ದಾರೆ.

Follow Us:
Download App:
  • android
  • ios