ಭಾರತದ ಟೆಸ್ಟ್​​​ ನಾಯಕ ವಿರಾಟ್​​​ ಕೊಹ್ಲಿಗೆ ಜಗತ್ತಿನೆಲ್ಲಡೆ ಅಭಿಮಾನಿಗಳಿದ್ದಾರೆ. ಆತನ ಅಭಿಮಾನಿಗಳು ಕೊಹ್ಲಿಯ ಪ್ರತಿಯೊಂದು ಹೆಜ್ಜೆಯನ್ನು ಅನುಸರಿಸುತ್ತಾರೆ. ಕೊಹ್ಲಿ ಇಷ್ಟು ಏತ್ತರಕ್ಕೆ ಬೆಳೆದಿದ್ದು ಹೇಗೆ ಮತ್ತು ಕೊಹ್ಲಿಯನ್ನು ಭಾರತದ ಪ್ರಮುಖ ಆಟಗಾರನ್ನಾಗಿಸಲು ಕಾರಣರಾದವರು ಅವರ ಗುರು ರಾಜ್​​ ಕುಮಾರ್​​​​ ಶರ್ಮಾ.

ಭಾರತದ ಟೆಸ್ಟ್​​​ ನಾಯಕ ವಿರಾಟ್​​​ ಕೊಹ್ಲಿಗೆ ಜಗತ್ತಿನೆಲ್ಲಡೆ ಅಭಿಮಾನಿಗಳಿದ್ದಾರೆ. ಆತನ ಅಭಿಮಾನಿಗಳು ಕೊಹ್ಲಿಯ ಪ್ರತಿಯೊಂದು ಹೆಜ್ಜೆಯನ್ನು ಅನುಸರಿಸುತ್ತಾರೆ. ಕೊಹ್ಲಿ ಇಷ್ಟು ಏತ್ತರಕ್ಕೆ ಬೆಳೆದಿದ್ದು ಹೇಗೆ ಮತ್ತು ಕೊಹ್ಲಿಯನ್ನು ಭಾರತದ ಪ್ರಮುಖ ಆಟಗಾರನ್ನಾಗಿಸಲು ಕಾರಣರಾದವರ ಯಾರು? ಇಲ್ಲಿದೆ ವಿವರ

ವಿರಾಟ್​ ಕೊಹ್ಲಿಯ ಬಾಲ್ಯದ ಕಥೆ

ವಿರಾಟ್​​ ಕೊಹ್ಲಿ ಇತನಿಗೆ ಕ್ರಿಕೆಟ್​​'ನಲ್ಲಿ ಗೊತ್ತಿಲ್ಲದ ಹೊಡೆತಗಳಿಲ್ಲ. ಚೇಸಿಂಗ್​​ ಮಾಸ್ಟರ್​​​​​ ಎಂಬ ಬಿರುದು ಪಡೆದಿರುವ ಕೊಹ್ಲಿ ಒಬ್ಬಂಟಿಯಾಗಿ ಕ್ರೀಸ್​​​​'ನಲ್ಲಿ ನಿಂತು ಪಂದ್ಯವನ್ನು ಗೆಲ್ಲಿಸಬಲ್ಲ ಛಲವಂತ. ಕೊಹ್ಲಿಯ ಬ್ಯಾಟಿಂಗ್ ಮಾತ್ರವಲ್ಲ, ಆತನ ಫಿಟ್ನೆಸ್ಸ್​​​​​, ಅಗ್ರೆಷನ್​​​​ ಕೂಡ ಅನಸರಿಸುತ್ತಾರೆ. ಆದರೆ ಕೊಹ್ಲಿ ಇಷ್ಟೆಲ್ಲ ಸಾಧನೆ ಮಾಡೊದಕ್ಕೆ ಕಾರಣ ಅವರ ಗುರು.

9ನೇ ವರ್ಷಕ್ಕೆ ಕ್ರಿಕೆಟ್​​​ ಪ್ರೇಮ

ಕೊಹ್ಲಿಯನ್ನು ತಿದ್ದಿ ತೀಡಿದ, ಆತನಿಗೆ ಸರಿಯಾಗಿ ಬ್ಯಾಟ್​ ಹಿಡಿಯಲು ಹೇಳಿಕೊಟ್ಟ ಮೊದಲ ಕೋಚ್​​ ರಾಜ್​​​​ ಕುಮಾರ್​​​ ಶರ್ಮಾ. ಕೊಹ್ಲಿ 9ರ ವಯಸ್ಸಿನಲ್ಲಿದ್ದಾಗ ಕ್ರಿಕೆಟ್​​​ ಕಲಿಯಲು ಅಕಾಡೆಮಿ ಸೇರಲು ತಿರ್ಮಾನಿಸಿ ಬಂದಿದ್ದು ಇವರ ಅಕಾಡೆಮಿಗೆ. ಅಕಾಡೆಮಿ ಸೇರಿದ 2 ವಾರಕ್ಕೆ ರಾಜ್​​ ಕುಮಾರ್​​​​ ಶರ್ಮಾರವರಿಗೆ ಇತನ ಉತ್ಸಾಹ, ಪ್ರತಿಭೆ ನೋಡಿ ಈತ ಒಂದು ದಿನ ಟೀಮ್​​​ ಇಂಡಿಯವನ್ನು ಪ್ರತಿನಿಧಿಸುತ್ತಾನೆ ಎಂದು ಅಂದೇ ಅಂದುಕೊಂಡಿದ್ದರು.

ಕೊಹ್ಲಿಯ ಫ್ಲಿಕ್​​​​​ ಶಾಟ್​​​ ಎಷ್ಟು ಸೋಗಸಾಗಿರುತ್ತೆ ಅಂತ ಎಲ್ಲರಿಗೂ ತಿಳಿದಿದೆ. ಆದರೆ ಕೊಹ್ಲಿ ಬಾಲ್ಯದಲ್ಲಿ ಫ್ಲಿಕ್​​ ಶಾಟ್​​​ ಹೊಡೆದರೆ ಕೊಚ್​​​ ರಾಜ್​​ ಕುಮಾರ್​​​ ಶರ್ಮಾರಿಂದ ಕೊಹ್ಲಿ ಬೈಗುಳಕ್ಕೆ ಒಳಗಾತಿದ್ದರಂತೆ.

ಬಳಿಕ ತನ್ನ ಸಿಗ್ನೇಚರ್​​​ ಶಾಟ್​​ಗಳನ್ನು ಕರಗತ ಮಾಡಿಕೊಂಡ ಕೊಹ್ಲಿ ನಂತರ ದೀರ್ಘ ಅವಧಿ ಇನ್ನಿಂಗ್ಸ್​​​​ ಆಡಲು ಶರ್ಮಾ ಶ್ರಮ ಪಟ್ಟರು. ಅದರಿಂದಲೇ ಇಂದು ಚೇಸ್​​ ಮಾಸ್ಟರ್​​​ ಎಂಬ ಹೆಸರು ಬಂದಿದ್ದು.

ಕೊಹ್ಲಿ ನಾಯಕತ್ವ ಗುಣ ಗುರುತಿಸಿದ ಶರ್ಮಾ

ದೀರ್ಘ ಇನ್ನಿಂಗ್ಸ್​​​ ಆಡಬಲ್ಲ ಶಕ್ತಿಯಿಂದಲೇ ಕೊಹ್ಲಿಗೆ ಟೆಸ್ಟ್​​​'ನಲ್ಲಿ ಭಾರತವನ್ನು ಮುನ್ನಡೆಸುವ ಅವಕಾಶ ಸಿಕ್ಕಿತು. ಕೊಹ್ಲಿಯ ಅಗ್ರೆಷನ್​​​ ಕ್ರಿಕೆಟ್​​ ಪ್ರಿಯರಿಗೆ ಇಷ್ಟವಾಯಿತು. ಟೆಸ್ಟ್​​​ ಕ್ರಿಕೆಟ್'​​​​ನಲ್ಲಿ ಸದ್ಯ ಧೋನಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಶರ್ಮಾ ಕೊಹ್ಲಿಯ ಬಾಲ್ಯದಲ್ಲೇ ನಾಯಕನ್ನಾಗುವ ಗುಣಗಳಿದಿದ್ದನ್ನು ಗುರುತಿಸಿದರು. ಭಾರತದ ತಂಡಕ್ಕೆ ಅವನ್ನೊಬ್ಬ ಯಶಸ್ವಿ ನಾಯಕನ್ನಾಗುತ್ತಾನೆಂಬ ಭರವಸೆ ಅವರಿಗಿತ್ತು.

ಅಗ್ರೆಷನ್​​​ ಜೊತೆಗೆ ಅಭಿಮಾನಿಗಳು ಕೊಹ್ಲಿಗೆ ಫಿದಾ ಅಗಿರುವುದು ಅತನ ಫಿಟ್​​ನೆಸ್​​​​ಗೆ. ಆತನ ದೇಹ ಸೌಂದರ್ಯ ಎಂಥವರನ್ನೂ ಆಕರ್ಶಿಸುತ್ತದೆ ಅದಕ್ಕಾಗಿ ಕೊಹ್ಲಿ ಗಂಟೆಗಟ್ಟಲೆ ಜಿಮ್​​​'ನಲ್ಲಿ ಬೆವರು ಹರಿಸುತ್ತಾರೆ. ಆದರೆ ಕೊಹ್ಲಿ ತನ್ನ ಬಾಲ್ಯದಲ್ಲಿ ತಿಂಡಿಪೋತನಾಗಿದ್ದರಂತೆ.

ಸದ್ಯ ರಾಜ್​​ ಕುಮಾರ್​​​ ಶರ್ಮಾರವರಿಗೆ ಧ್ರೋಣಚಾರ್ಯ ಪ್ರಶಸ್ತಿ ದೊರೆತಿದ್ದು. ಅದಕ್ಕೆ ಕೊಹ್ಲಿಯೆ ಕಾರಣವೆಂದು ಹೇಳಿದ್ದಾರೆ. ಕೊಹ್ಲಿ ಇನ್ನೂ ಏತ್ತರಕ್ಕೆ ಬೆಳೆಯಲ್ಲಿ ಜಗತ್ತಿನ ಶ್ರೇಷ್ಠ ಆಟಗಾರ ಮತ್ತು ನಾಯಕನಾಗಲಿ ಎಂಬುದು ಶರ್ಮಾರ ಆಶಯ.