ಶತಕ ಸಿಡಿಸಿ ಅಪಖ್ಯಾತಿಗೆ ಗುರಿಯಾದ ನಾಯಕ ಕೊಹ್ಲಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 5:38 PM IST
Kohli become Most Test centuries for captains in a losing cause
Highlights

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದರೂ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ತಂಡದ ಗೆಲುವಿಗಾಗಿ ಶ್ರಮಿಸಿ ಕೊನೆಗೆ ಅಪಖ್ಯಾತಿಗೆ ಗುರಿಯಾಗಿದ್ದೇಕೆ ? ಇಲ್ಲಿದೆ.

ಎಡ್ಜ್‌ಬಾಸ್ಟನ್(ಆ.04): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 31 ರನ್‌ಗಳ ವಿರೋಚಿತ  ಸೋಲು ಅನುಭವಿಸಿದೆ. ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಹಾಗೂ 2ನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು.

ಕೊಹ್ಲಿ ದಿಟ್ಟ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಶ್ರಮಿಸಿದ್ದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನದಿಂದ ವಿರಾಟ್ ಕೊಹ್ಲಿ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಶತಕ ಸಿಡಿಸಿಯೂ ಪಂದ್ಯ ಸೋತ ನಾಯಕರಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.

5 ಬಾರಿ ವಿರಾಟ್ ಕೊಹ್ಲಿ ಶತಕ ಸಿಡಿಸಿಯೂ ಪಂದ್ಯ ಸೋತಿದ್ದಾರೆ. ಈ ಮೂಲಕ ವೆಸ್ಟ್ಇಂಡೀಸ್‌ನ ಬ್ರಿಯಾನ್ ಲಾರ ಹಿಂದಿಕ್ಕಿದ್ದಾರೆ. ಲಾರ ನಾಯಕನಾಗಿ ಶತಕ ಸಿಡಿಸಿದಾಗ ತಂಡ 4 ಬಾರಿ ಸೋಲು ಕಂಡಿದೆ. ಇದೀಗ ಕೊಹ್ಲಿ ಶತಕ ಸಿಡಿಸಿಯೂ 5 ಬಾರಿ ಸೋಲಿನ ರುಚಿ ಅನುಭವಿಸುವಂತಾಗಿದೆ. ಆಸ್ಟ್ರೇಲಿಯಾದ ಸ್ಟೀವ್ ವ್ಹಾ 4 ಬಾರಿ ಶತಕ ಸಿಡಿಸಿಯೂ ಸೋಲಿಗೆ  ಜಾರಿದ್ದಾರೆ.

loader