ನಟಿ ಸೋನಮ್ ಜೊತೆಗಿನ ರಿಲೇಶನ್‌ಶಿಪ್‌ಗೆ ಕ್ರಿಕೆಟಿಗ ಕೆಎಲ್ ರಾಹುಲ್ ಹೇಳಿದ್ದೇನು?

KL Rahul responds with witty reply to Punjabi actress’ post
Highlights

ಪಂಜಾಬಿ ನಟಿ ಸೋನಮ್ ಬಾಜ್ವ ಜೊತೆಗಿನ ರಿಲೇಷನ್‌ಶಿಪ್‌ ಕುರಿತು ಕ್ರಿಕೆಟಿಗ ಕೆಎಲ್ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಸೋನಮ್ ಜೊತೆ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರ? ಇಲ್ಲಿದೆ ರಾಹುಲ್ ಪ್ರತಿಕ್ರಿಯೆ.

ಒಲ್ಡ್ ಟ್ರಾಫೋರ್ಡ್(ಜು.02): ಟೀಂ ಇಂಡಿಯಾ ಸ್ಟಾರ್  ಕ್ರಿಕೆಟಿಗ ಕೆಎಲ್ ರಾಹುಲ್ ಹೆಸರು ಹಲವು ಬಾಲಿವುಡ್ ನಟಿ ಹಾಗೂ ಮಾಡೆಲ್‌ಗಳ ಜೊತೆ ಕೇಳಿ ಬಂದಿತ್ತು. ಪ್ರತಿ ಬಾರಿ ಕರ್ನಾಟಕ ಕ್ರಿಕೆಟಿಗ ರಾಹುಲ್ ಸ್ಪಷ್ಟಣೆ ನೀಡಿದ್ದಾರೆ. ಇದೀಗ ಪಂಜಾಬಿ ನಟಿ ಸೋನಮ್ ಬಾಜ್ವ ಜೊತೆಗಿನ ರಿಲೇಷನ್‌ಶಿಪ್ ಕುರಿತು ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದಾರೆ.

ನಟಿ ಸೋನಮ್ ಬಾಜ್ವ ಜೊತೆ ಕ್ರಿಕೆಟಿಗ ಕೆಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಸೋನಮ್ ಬಾಜ್ವ ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ರಾಹುಲ್ ಪ್ರತಿಕ್ರಿಯಿಸೋ ಮೂಲಕ ಇವರ ನಡುವಿನ ಡೇಟಿಂಗ್ ಮತ್ತಷ್ಟು ಬಲಗೊಂಡಿತ್ತು.

 

 

Watching sunset and thinking of you❤️

A post shared by Sonam Bajwa (@sonambajwa) on

 

ಸೋನಮ್ ಜೊತೆಗಿನ ಡೇಟಿಂಗ್ ಕುರಿತು ಕೆಎಲ್ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾರೊಂದಿಗಾದರೂ ಡೇಟಿಂಗ್ ಅಥವಾ ಯಾವುದೇ ಸಂಬಂಧ ಹೊಂದುವುದಾದರೂ ಮೊದಲೇ ತಿಳಿಸುತ್ತೇನೆ ಎಂದಿದ್ದಾರೆ.

ಇದನ್ನು ಓದಿ: ನಟಿ ಸೋನಮ್ ಬಾಜ್ವ ಜೊತೆ ಕ್ರಿಕೆಟಿಗ ಕೆಎಲ್ ರಾಹುಲ್ ಡೇಟಿಂಗ್ ನಿಜವೇ?

loader