ನಟಿ ಸೋನಮ್ ಬಾಜ್ವ ಜೊತೆ ಕ್ರಿಕೆಟಿಗ ಕೆಎಲ್ ರಾಹುಲ್ ಡೇಟಿಂಗ್ ನಿಜವೇ?

First Published 1, Jul 2018, 5:07 PM IST
KL Rahul Dating Punjabi Actress Sonam Bajwa reports
Highlights

ಕ್ರಿಕೆಟಿಗ ಕೆಎಲ್ ರಾಹಲು ಹೆಸರು ಹಲವು ಸೆಲೆಬ್ರೆಟಿಗಳ ಜೊತೆ ಥಳಕುಹಾಕಿದೆ. ಇದೀಗ ರಾಹುಲ್ ಪಂಜಾಬಿ ನಟಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಹಾಗಾದರೆ ಕೆಎಲ್ ರಾಹುಲ್ ಡೇಟಿಂಗ್ ನಿಜವೇ?  ಇಲ್ಲಿದೆ ಉತ್ತರ.

ಒಲ್ಡ್ ಟ್ರಾಫೋರ್ಡ್(ಜು.01): ಟೀಂಇಂಡಿಯಾ ಕ್ಲಾಸ್ ಹಾಗೂ ಸ್ಟೈಲೀಶ್ ಕ್ರಿಕೆಟರ್ ಆಗಿ ಗುರುತಿಸಿಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಇದೀಗ ರಾಹುಲ್, ಪಂಜಾಬಿ ನಟಿ ಸೋನಮ್ ಬಾಜ್ವ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳ ಕೇಳಿಬಂದಿದೆ.

 

 

Watching sunset and thinking of you❤️

A post shared by Sonam Bajwa (@sonambajwa) on

 

ಸೋನಮ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್‌ಲೋಡ್ ಮಾಡಿ ನಿನ್ನ ನೆನೆಯುತ್ತಾ ಸೂರ್ಯಾಸ್ತವನ್ನ ನೋಡುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಕೆಎಲ್ ರಾಹುಲ್ ಕೂಡ ಪ್ರತಿಕ್ರಿಯಿಸಿದ್ದಾರೆ. 

ಸೋನಮ್ ಬಾಜ್ವ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೆ ರಾಹುಲ್ ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಕೆಎಲ್ ರಾಹುಲ್ ಹೆಸರು ಬಾಲಿವುಡ್ ನಟಿ ನಿಧಿ ಅಗರ್ವಾಲ್ ಜೊತೆ ಥಳುಕು ಹಾಕಿತ್ತು. ಆದರೆ ಇವರಿಬ್ಬರು ವರದಿಯನ್ನ ತಳ್ಳಿಹಾಕಿ ಸ್ಪಷ್ಟಣೆ ನೀಡಿದ್ದರು.

ಇದೀಗ ಸೋನಮ್ ಬಾಜ್ವ ಜೊತೆಗಿನ ಡೇಟಿಂಗ್ ಕುರಿತು ರಾಹುಲ್ ಆಗಲಿ, ಸೋನಮ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಷ್ಟೇ ಅಲ್ಲ ರಾಹುಲ್ ಜನಪ್ರೀಯ ಕ್ರಿಕೆಟರ್ ಆಗಿರೋದರಿಂದ ಹಲವು ಸೆಲೆಬ್ರೆಟಿಗಳ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ. ಹೀಗಾಗಿ ಡೇಟಿಂಗ್ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.

loader