ಕೋಲ್ಕತ್ತಾ(ಮೇ.03): ಉದಯೋನ್ಮುಖ ಆಟಗಾರ ಶುಬ್ಮಾನ್ ಗಿಲ್, ನಾಯಕ ದಿನೇಶ್ ಕಾರ್ತಿಕ್ ಭರ್ಜರಿ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್  ಗೆಲುವಿನ ಓಟಕ್ಕೆ ಕೋಲ್ಕತ್ತಾ ನೖಟ್ ರೈಡರ್ಸ್ ತಡೆ ನೀಡಿದ್ದಾರೆ.
ಧೋನಿ ಬಳಗ ನೀಡಿದ್ದ 177 ರನ್'ಗಳ ಸವಾಲನ್ನು17.4 ಓವರ್'ಗಳಲ್ಲಿ 4 ವಿಕೇಟ್ ಕಳೆದುಕೊಂಡು ಸಮಾಪ್ತಿಗೊಳಿಸಿದರು. ಸುನೀಲ್ ನರೈನ್ (32: 4 ಬೌಂಡರಿ, 2 ಸಿಕ್ಸ್'ರ್) ಆರಂಭದಲ್ಲಿ ಭದ್ರ ಬುನಾದಿ ಹಾಕಿದರೆ  12ನೇ ಓವರ್'ನಿಂದ ಆಟ ಆರಂಭಿಸಿದ ಶುಬ್ಮಾಮ್ ಗಿಲ್ ಹಾಗೂ ದಿನೇಶ್ ಕಾರ್ತಿಕ್ ಗೆಲುವಿನ ಮುನ್ನಡಿ ಬರೆದರು. ಗಿಲ್ 36 ಚಂಡುಗಳಲ್ಲಿ 6 ಬೌಂಡರಿ, 2 ಸಿಕ್ಸ್'ರ್ನೊಂದಿಗೆ  ಅಜೇಯ 57 ಸಿಡಿಸಿದರೆ ದಿನೇಶ್ ಕಾರ್ತಿಕ್  ಕೇವಲ 18 ಬಾಲ್ಗಳಲ್ಲಿ 7 ಬೌಂಡರಿ, 1 ಸಿಕ್ಸ್'ರ್ನೊಂದಿಗೆ ಔಟಾ್ಗದೆ 45 ಬಾರಿಸಿದರು.
ಇದಕ್ಕೂ ಮೊದಲು  ಟಾಸ್ ಗೆದ್ದ ಕೋಲ್ಕತ್ತಾ ತಂಡ ಚೆನ್ನೈ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ವ್ಯಾಟ್ಸ್'ನ್(36),ರೈನಾ (31),ಧೋನಿ ಅಜೇಯ (43 ) ಆಟದೊಂದಿಗೆ 20 ಓವರ್'ಗಳಲ್ಲಿ 177/5 ಮೊತ್ತ ಪೇರಿಸಿದ್ದರು.

ಸ್ಕೋರ್ 
ಚೆನ್ನೈ 20 ಓವರ್'ಗಳಲ್ಲಿ 177/5
(ಧೋನಿ 43,ವ್ಯಾಟ್ಸ್'ನ್ 36)
ಕೋಲ್ಕತ್ತಾ 17.4 ಓವರ್'ಗಳಲ್ಲಿ 180/4