ರಾಹುಲ್ ಸ್ಫೋಟಕ ಆಟ : ಪಂಜಾಬ್ ರೋಚಕ ಗೆಲುವು

Kings XI won by 6 wickets (with 8 balls
Highlights

84(54) ರನ್'ಗಳ ರಾಹುಲ್ ಅಮೋಘ ಆಟದಲ್ಲಿ 3 ಸಿಕ್ಸ್'ರ್ ಹಾಗೂ 7 ಬೌಂಡರಿಗಳಿದ್ದವು. ಕೊನೆಯಲ್ಲಿ  ಸ್ಟೋನಿಸ್(23) ಉತ್ತಮ ಬೆಂಬಲ ನೀಡಿದರು. ಇದಕ್ಕೂ ಮೊದಲು ಟಾಸ್ ಗೆದ್ದ ಕಿಂಗ್ಸ್ ಇಲೆವನ್ ರಹಾನೆ ಬಳಗವನ್ನು ಬ್ಯಾಟಿಂಗ್ ಆಹ್ವಾನಿಸಿತು. ಶಾರ್ಟ್, ರಹಾನೆ ಬೇಗನೆ ಪೆವಿಲಿಯನ್'ಗೆ ತೆರಳಿಸಿದರು. 

ಇಂಧೋರ್(ಮೇ.06): ಕನ್ನಡಿಗ ಕೆ.ಎಲ್. ರಾಹುಲ್ ಸ್ಫೋಟಕ ಆಟದಿಂದ ಪಂಜಾಬ್ ಕಿಂಗ್ಸ್ ಇಲವೆನ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 6 ವಿಕೇಟ್'ಗಳ ಗೆಲುವು ಸಾಧಿಸಿತು.
152 ರನ್'ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕಿಂಗ್ಸ್  8 ಚಂಡುಗಳಿರುವಂತೆ ಗುರಿ ಮುಟ್ಟಿದರು. ಗೇಲ್, ಅಗರ್'ವಾಲ್  ಕೈಕೊಟ್ಟರೂ ರಾಹುಲ್'ಗೆ ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್(31)  ಜೊತೆಯಾಗಿ ನಿಂತು ಜಯಗಳಿಸಲು ಕಾರಣರಾದರು.
84(54) ರನ್'ಗಳ ರಾಹುಲ್ ಅಮೋಘ ಆಟದಲ್ಲಿ 3 ಸಿಕ್ಸ್'ರ್ ಹಾಗೂ 7 ಬೌಂಡರಿಗಳಿದ್ದವು. ಕೊನೆಯಲ್ಲಿ  ಸ್ಟೋನಿಸ್(23) ಉತ್ತಮ ಬೆಂಬಲ ನೀಡಿದರು.   
ಇದಕ್ಕೂ ಮೊದಲು ಟಾಸ್ ಗೆದ್ದ ಕಿಂಗ್ಸ್ ಇಲೆವನ್ ರಹಾನೆ ಬಳಗವನ್ನು ಬ್ಯಾಟಿಂಗ್ ಆಹ್ವಾನಿಸಿತು. ಶಾರ್ಟ್, ರಹಾನೆ ಬೇಗನೆ ಪೆವಿಲಿಯನ್'ಗೆ ತೆರಳಿಸಿದರು. ಸ್ಯಾಮ್ಸ್'ನ್'ನೊಂದಿಗೆ 3ನೇ ವಿಕೇಟ್ ನಷ್ಟಕ್ಕೆ ಜೊತೆಯಾಟವಾಡಿ 55 ಚಂಡುಗಳಲ್ಲಿ 84 ರನ್ ದಾಖಲಿಸಿದರು. ಅನಂತರ ರೆಹಮಾನ್ 27/3 ಹಾಗೂ ತೆಯಿ 24/2 ದಾಳಿಗೆ ಪಟಪಟನೆ ಕೋಲ್ಕತ್ತಾ ಆಟಗಾರರು ಪಟಪಟನೆ ವಿಕೇಟ್ ಕಳೆದುಕೊಂಡರು.  ಕನ್ನಡಿಗ ಶ್ರೇಯಸ್ ಗೋಪಾಲ್(24) ಕೊನೆಯಲ್ಲಿ ಒಂದಿಷ್ಟು ಚುರುಕಿನ ಆಟವಾಡಿದರು. ಅಂತಿಮವಾಗಿ 20 ಓವರ್ಗಳಿಗೆ 152/9 ದಾಖಲಿಸಿದರು.

ಸ್ಕೋರ್ 
ರಾಜಸ್ಥಾನ್ ರಾಯಲ್ಸ್ 20 ಓವರ್'ಗಳಲ್ಲಿ 152/9 
(ಬಟ್ಲರ್ 51, ರೆಹಮಾನ್ 27/3)

ಪಂಜಾಬ್ ಕಿಂಗ್ಸ್ ಇಲವೆನ್ 18.4 ಓವರ್'ಗಳಲ್ಲಿ 155
(ರಾಹುಲ್ 84, ನಾಯರ್ 31)

ಫಲಿತಾಂಶ: ಪಂಜಾಬ್'ಗೆ 6 ವಿಕೇಟ್'ಗಳ ಜಯ

loader