ಪಂಜಾಬ್(ಮೇ.01): 12ನೇ ಆವೃತ್ತಿ ಐಪಿಎಲ್ ಟೂರ್ನಿ ಹಲವು ಕ್ರಿಕೆಟಿಗರಿಗೆ ಹೊಸ ಕರಿಯರ್ ನೀಡಿದೆ. ಕಳಪೆ ಫಾರ್ಮ್‌ನಲ್ಲಿದ್ದರುವ ಫಾರ್ಮ್ ಕಂಡುಕೊಂಡಿದ್ದರೆ, ಯುವ ಕ್ರಿಕೆಟಿಗರು ಅವಕಾಶವನ್ನು ಬಳಸಿಕೊಂಡಿದ್ದಾರೆ. ಆದರೆ ಹರಾಜಿನಲ್ಲಿ ಬರೋಬ್ಬರಿ 8.4 ಕೋಟಿ ರೂಪಾಯಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೇರಿಕೊಂಡ ವರುಣ್ ಚಕ್ರವರ್ತಿ ಕತೆ ಮಾತ್ರ ಸ್ವಲ್ಪ ಭಿನ್ನವಾಗಿದೆ. ಒಂದು ಪಂದ್ಯ ಆಡಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ: CSK,RR ಬಳಿಕ ಅಮಾನತು ಭೀತಿಯಲ್ಲಿ ಕಿಂಗ್ಸ್ XI ಪಂಜಾಬ್!

ತಮಿಳುನಾಡು ಮೂಲದ ವರುಣ್ ಚಕ್ರವರ್ತಿ ಹರಾಜಿನಲ್ಲಿ ಎಲ್ಲರ ಗಮನಸೆಳೆದ ಕ್ರಿಕೆಟಿಗ. ಆದರೆ ಈ ಆವೃತ್ತಿಯಲ್ಲಿ ವರುಣ್ ಚಕ್ರವರ್ತಿ ಆಡಿರುವುದು ಕೇವಲ ಒಂದು ಪಂದ್ಯ ಮಾತ್ರ. ಅಷ್ಟರಲ್ಲೇ ಇಂಜುರಿಗೆ ತುತ್ತಾದ ವರುಣ್ ಚಕ್ರವರ್ತಿ ಐಪಿಎಲ್ ಲೀಗ್ ಪಂದ್ಯ ಅಂತಿಮ ವೇಳೆಗೆ ಚೇತರಿಸಿಕೊಳ್ಳೋ ಸೂಚನೆ ನೀಡಿದ್ದರು. ಆದರೆ ಇಂಜುರಿಯಿಂದ ಚೇತರಿಸಿಕೊಳ್ಳದ ಕಾರಣ ವರುಣ್ ಚಕ್ರವರ್ತಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ಇದನ್ನೂ ಓದಿ: ಬದಲಾಗಿದೆ ಡೆಲ್ಲಿ ಕ್ಯಾಪಿಟಲ್ಸ್ ಟೀಂ; ಇಲ್ಲಿದೆ ನೋಡಿ ಸಕ್ಸಸ್ ಸೀಕ್ರೇಟ್ಸ್

ಈ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ 3 ಓವರ್ ಬೌಲಿಂಗ್ ಮಾಡಿದ್ದ ವರುಣ್ ಚಕ್ರವರ್ತಿ 35 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಬಳಿಕ ಇಂಜುರಿ ಕಾರಣದಿಂದ ತಂಡದಿಂದ ಹೊರಗುಳಿಯಬೇಕಾಯಿತು. ಇದೀಗ ಟೂರ್ನಿಯಿಂದಲೇ ಹೊರಬೀಳೋ ಮೂಲಕ ತೀವ್ರ ನಿರಾಸೆ ಅನುಭವಿಸಿದ್ದಾರೆ.