Asianet Suvarna News Asianet Suvarna News

ಏಷ್ಯನ್ ಅಥ್ಲೆಟಿಕ್ಸ್'ನ ಪದಕ ವಿಜೇತರಿಗೆ ಕೇರಳ ಸರ್ಕಾರದಿಂದ ಭರ್ಜರಿ ಇನಾಮು

ತಂಡಗಳ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದವರಿಗೆ ₹5 ಲಕ್ಷ, ಬೆಳ್ಳಿ ಗೆದ್ದವರಿಗೆ ₹3.5 ಹಾಗೂ ಕಂಚಿನ ಪದಕ ಗೆದ್ದ ಅಥ್ಲೀಟ್‌'ಗಳಿಗೆ ₹2.5 ಲಕ್ಷ ನೀಡುವುದಾಗಿ ಕೇರಳ ಸರ್ಕಾರದ ಪ್ರಕಟಣೆ ತಿಳಿಸಿದೆ.

Kerala government announces cash award to medal winners in Asian Athletic meet

ತಿರುವನಂತಪುರಂ(ಜು.12): ಇತ್ತೀಚೆಗೆ ಮುಕ್ತಾಯಗೊಂಡ 22ನೇ ಏಷ್ಯನ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ರಾಜ್ಯದ ಅಥ್ಲೀಟ್‌'ಗಳಿಗೆ ಕೇರಳ ಸರ್ಕಾರ ನಗದು ಬಹುಮಾನ ಘೋಷಿಸಿದೆ.

ಚಿನ್ನದ ಪದಕ ಗೆದ್ದವರಿಗೆ ₹10 ಲಕ್ಷ, ಬೆಳ್ಳಿ ಗೆದ್ದವರಿಗೆ ₹7 ಲಕ್ಷ ಹಾಗೂ ಕಂಚಿನ ಪದಕ ಗೆದ್ದ ಅಥ್ಲೀಟ್‌'ಗಳಿಗೆ ₹5 ಲಕ್ಷ ಬಹುಮಾನ ನೀಡಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಇನ್ನು ತಂಡಗಳ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದವರಿಗೆ ₹5 ಲಕ್ಷ, ಬೆಳ್ಳಿ ಗೆದ್ದವರಿಗೆ ₹3.5 ಹಾಗೂ ಕಂಚಿನ ಪದಕ ಗೆದ್ದ ಅಥ್ಲೀಟ್‌'ಗಳಿಗೆ ₹2.5 ಲಕ್ಷ ನೀಡುವುದಾಗಿ ಕೇರಳ ಸರ್ಕಾರದ ಪ್ರಕಟಣೆ ತಿಳಿಸಿದೆ.

Follow Us:
Download App:
  • android
  • ios