ಕಾರ್ಡಿಫ್‌[ಮೇ.29]: ಟೀಂ ಇಂಡಿಯಾದ ಆಲ್ರೌಂಡರ್ ಬಾಲಿವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ರೇಸ್ 3 ಮುಂದುವರೆದ ಭಾಗ ಎನ್ನಲಾದ ರೇಸ್ 4 ಚಿತ್ರದಲ್ಲಿ ಕೇದಾರ್ ಜಾಧವ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಭಾರತ ತಂಡದ ಆಲ್ರೌಂಡರ್‌ ಕೇದಾರ್‌ ಜಾಧವ್‌, ರೇಸ್‌ 4 ಬಾಲಿವುಡ್‌ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇದಕ್ಕೆ ಕಾರಣ, ಜಾಧವ್‌ ಜತೆ ರೋಹಿತ್‌ ಶರ್ಮಾ ನಡೆಸಿರುವ ವಿಡಿಯೋ ಸಂದರ್ಶನ. 

 
 
 
 
 
 
 
 
 
 
 
 
 

Bus drives are fun! PS - listen carefully! @kedarjadhavofficial @royalnavghan

A post shared by Rohit Sharma (@rohitsharma45) on May 26, 2019 at 6:54am PDT

‘ಕೇದಾರ್‌, ನೀವು ರೇಸ್‌ 4 ಚಿತ್ರದಲ್ಲಿ ನಟಿಸುತ್ತೀರಿ ಎನ್ನುವ ವಿಷಯ ತಿಳಿದು ಬಂದಿದೆ. ನಿಜವೇ’ ಎಂದು ರೋಹಿತ್‌ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಜಾಧವ್‌, ‘ಹೌದು, ಆದರೆ ಇನ್ನೂ ಅಂತಿಮಗೊಂಡಿಲ್ಲ. ಚಿತ್ರ ತಂಡದೊಂದಿಗೆ ಮಾತಕತೆ ನಡೆಸಿದ್ದೇನೆ. 4 ತಿಂಗಳ ಬಳಿಕ ನಿಮಗೆಲ್ಲಾ ಅಚ್ಚರಿ ಕಾದಿದೆ’ ಎಂದಿದ್ದಾರೆ. ಈ ವರೆಗೂ ರೇಸ್‌ 4 ಚಿತ್ರ ಸಿದ್ಧಗೊಳಿಸುವ ಕುರಿತು ಯಾವುದೇ ನಿರ್ದೇಶಕ, ನಿರ್ಮಾಪಕರು ಬಹಿರಂಗಗೊಳಿಸಿಲ್ಲ.

ಕೇದಾರ್ ಫಿಟ್ನೆಸ್ ರಿಪೋರ್ಟ್ ಬಹಿರಂಗ -ವಿಶ್ವಕಪ್ ಆಡ್ತಾರಾ ಆಲ್ರೌಂಡರ್?

ಪ್ರಸ್ತುತ ಕೇದಾರ್ ಜಾಧವ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಗಾಯದ ಬಳಿಕ ತಂಡ ಕೂಡಿಕೊಂಡಿದ್ದಾರೆ. ಭಾರತ ತಂಡವು ಜೂನ್ 05ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...