ಐಪಿಎಲ್ ಟೂರ್ನಿಯಲ್ಲಿ ಭುಜಕ್ಕೆ ಗಾಯ ಮಾಡಿಕೊಂಡ ಕೇದಾರ್ ಜಾಧವ್, ಕ್ರಿಕೆಟ್‌ನಿಂದ ಹೊರಗುಳಿದು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಕೇದಾರ್ ಜಾಧವ್ ಪಿಟ್ನೆಸ್ ರಿಪೋರ್ಟ್ ಬಹಿರಂಗವಾಗಿದೆ. 

ಮುಂಬೈ(ಮೇ.18): ಐಪಿಎಲ್ ಟೂರ್ನಿ ವೇಳೆ ಇಂಜುರಿಗೆ ತುತ್ತಾದ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ವಿಶ್ವಕಪ್ ಟೂರ್ನಿಗೆ ಅನುಮಾನ ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಇದೀಗಿ ಬಿಸಿಸಿಐ ಕೇದಾರ್ ದಾಧವ್ ಫಿಟ್ನೆಸ್ ರಿಪೋರ್ಟ್ ಬಹಿರಂಗ ಪಡಿಸಿದೆ. ಕೇದಾರ್ ಜಾಧವ್ ಸಂಪೂರ್ಣ ಫಿಟ್ ಆಗಿದ್ದು, ವಿಶ್ವಕಪ್ ಟೂರ್ನಿ ಆಡಲಿದ್ದಾರೆ ಎಂದು ಹೇಳಿದೆ.

Add Asianetnews Kannada as a Preferred SourcegooglePreferred

ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಕಹಾನಿ: ಈ ಹಿಂದೆ ಹೇಗಿತ್ತು? ಈ ಬಾರಿ ಹೇಗಿರತ್ತೇ?

ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಬುತ ಪ್ರದರ್ಶನ ನೀಡುತ್ತಿದ್ದ ಕೇದಾರ್ ಫೀಲ್ಡಿಂಗ್ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ತಕ್ಷಣವೇ ಕ್ರೀಡಾಂಗಣದಿಂದ ಹೊರನಡೆದ ಕೇದಾರ್, ಬಾಕಿ ಉಳಿದ ಐಪಿಎಲ್ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಕೇದಾರ್ ಜಾಧವ್, ಮೇ. 22 ರಂದು ಟೀಂ ಇಂಡಿಯಾ ಜೊತೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ಇದನ್ನೂ ಓದಿ: ವಿಶ್ವಕಪ್ 2019: ಪಾಕ್ ತಂಡಕ್ಕೆ ಮಾರಕ ವೇಗಿ ಆಯ್ಕೆ- ಶುರುವಾಯ್ತು ನಡುಕ!

ಬಿಸಿಸಿಐ ವರದಿ ಬಿಡುಗಡೆಯಾಗುತ್ತಿದ್ದಂತೆ ಅಂಬಾಟಿ ರಾಯುಡುಗೆ ನಿರಾಸೆಯಾಗಿದೆ. ವಿಶ್ವಕಪ್ ತಂಡದ ಆಯ್ಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದ ರಾಯುಡುಗೆ ಕೇದಾರ್ ಇಂಜುರಿಯಿಂದ ಸ್ಥಾನ ಸಿಗೋ ನಿರೀಕ್ಷೆಯಲ್ಲಿದ್ದರು. ಇಷ್ಟೇ ಅಲ್ಲ ಕೇದಾರ್ ಬದಲಿ ಆಟಗಾರನಾಗಿ ಆಯ್ಕೆ ಸಮಿತಿ ರಾಯುಡು ಸೂಚಿಸಿತ್ತು. ಇದೀಗ ಕೇದಾರ್ ಸಂಪೂರ್ಣ ಫಿಟ್ ಆಗಿರೋದು ರಾಯುಡು ಅವಕಾಶವನ್ನು ತಪ್ಪಿಸಿದೆ.