ಮೊಣಕಾಲು ಗಾಯದಿಂದಾಗಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಿದ್ದ ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಕಶ್ಯಪ್, ಈ ಟೂರ್ನಿಯ ಮೂಲಕ ತಮ್ಮ ವೃತ್ತಿಜೀವನಕ್ಕೆ ವಾಪಸಾಗಿದ್ದರು.

ಸಿಯೋಲ್(ಡಿ.10): ಕೊರಿಯನ್ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪರುಪಳ್ಳಿ ಕಶ್ಯಪ್ ಅವರ ಜಯದ ನಾಗಾಲೋಟ ಅಂತ್ಯಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಅವರು, ಸ್ಥಳೀಯ ಪ್ರತಿಭೆ ಸೊನ್ ವಾನ್ ಹೊ ಅವರ ವಿರುದ್ಧ 23-21, 21-16 ಗೇಮ್‌'ಗಳ ಅಂತರದಲ್ಲಿ ಸೋಲು ಕಂಡರು.

ಮೊಣಕಾಲು ಗಾಯದಿಂದಾಗಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಿದ್ದ ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಕಶ್ಯಪ್, ಈ ಟೂರ್ನಿಯ ಮೂಲಕ ತಮ್ಮ ವೃತ್ತಿಜೀವನಕ್ಕೆ ವಾಪಸಾಗಿದ್ದರು. ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ್ದ ಅವರು, ಉಪಾಂತ್ಯದವರೆಗೆ ಪಯಣಿಸುವ ಮೂಲಕ ತಮ್ಮ ಫಾರ್ಮ್ ಸಾಬೀತುಪಡಿಸಿದ್ದಾರೆ.