ನವದೆಹಲಿ(ಸೆ.10): ಕರ್ನಾಟಕದ ಯುವ ಸೈಕ್ಲಿಸ್ಟ್‌ ವೆಂಕಪ್ಪ ಕೆಂಗಲಗುತ್ತಿ, ಸೋಮವಾರದಿಂದ ಇಲ್ಲಿ ಆರಂಭವಾಗಿರುವ ಟ್ರ್ಯಾಕ್‌ ಏಷ್ಯಾ ಕಪ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಭಾರತ ತಂಡ ಮೊದಲ ದಿನವೇ 4 ಚಿನ್ನ ಸೇರಿದಂತೆ 12 ಪದಕ ಗೆದ್ದಿದೆ. 

ಇದನ್ನೂ ಓದಿ: ಭಾರತ ಸೈಕ್ಲಿಂಕ್ ತಂಡಕ್ಕೆ ವೀಸಾ ನಿರಾಕರಿಸಿದ ಸ್ವಿಟ್ಜರ್‌ಲೆಂಡ್!

ಕಿರಿಯ ಪುರುಷರ 10 ಕಿ.ಮೀ. ಸ್ಕ್ರ್ಯಾಚ್‌ ರೇಸ್‌ನಲ್ಲಿ ವೆಂಕಪ್ಪ ಬೆಳ್ಳಿ ಜಯಿಸಿದರೆ, ಎಲಂಗ್ಬಾಮ್‌ ಕಂಚಿನ ಪದಕ ಗೆದ್ದರು. ಕಿರಿಯ ಪುರುಷರ ಸ್ಟ್ರಿಂಟ್‌ ತಂಡ ಚಿನ್ನದ ಪದಕ ಗೆದ್ದಿತು. ಕಿರಿಯ ಮಹಿಳೆಯರ ಸ್ಟ್ರಿಂಟ್‌ ಸ್ಪರ್ಧೆಯಲ್ಲಿ ತ್ರಿಶಾ ಪೌಲ್‌ ಚಿನ್ನ ಗೆದ್ದರು. \\

ಇದನ್ನೂ ಓದಿ: ಫಿಫಾ ವಿಶ್ವಕಪ್‌ ಬೆಂಬಲಿಸಲು ಇಂಗ್ಲೆಂಡ್‌ನಿಂದ ರಷ್ಯಾಗೆ ಸೈಕಲ್ ತುಳಿದ ಫ್ಯಾನ್ಸ್

ಇದಕ್ಕೂ ಮನ್ನ ಟೈಮ್‌ ಟ್ರಯಲ್‌ 500 ಮೀ. ಸ್ಪರ್ಧೆಯಲ್ಲಿ ತ್ರಿಶಾ ಚಿನ್ನಕ್ಕೆ ಮುತ್ತಿಟ್ಟಿದ್ದರು. ನಿಶಾ ಬೆಳ್ಳಿ ಗೆದ್ದರು. ಮಹಿಳೆಯರ ಟೈಮ್‌ ಟ್ರಯಲ್‌ 500 ಮೀ. ಸ್ಪರ್ಧೆಯಲ್ಲಿ ಸಾಯ್‌ನ ಮಯೂರಿ ಲೂಟೆ ಚಿನ್ನ ಜಯಿಸಿದರು.