ನವ​ದೆ​ಹ​ಲಿ(ಸೆ.10): ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿ​ಡಿ​ಸಿಎ) ಗುರು​ವಾರ ಇಲ್ಲಿನ ಫಿರೋಜ್‌ ಶಾ ಕೋಟ್ಲಾ ಮೈದಾ​ನ​ದ ಸ್ಯಾಂಡ್‌ವೊಂದಕ್ಕೆ ವಿರಾಟ್‌ ಕೊಹ್ಲಿ ಹೆಸ​ರನ್ನು ನಾಮ​ಕ​ರಣ ಮಾಡ​ಲಿದೆ. ಕಾರ್ಯ​ಕ್ರ​ಮದಲ್ಲಿ ಭಾರತ ತಂಡದ ಆಟ​ಗಾ​ರರು ಪಾಲ್ಗೊ​ಳ್ಳ​ಲಿ​ದ್ದಾರೆ ಎಂದು ಡಿಡಿ​ಸಿಎ ಅಧಿ​ಕಾರಿ ತಿಳಿ​ಸಿ​ದ್ದಾರೆ. 

ಇದನ್ನೂ ಓದಿ: 2025ರಲ್ಲಿ ಕೊಹ್ಲಿ ಪಾಕ್ ತಂಡದ ಆರಂಭಿಕ; ನೆಟ್ಟಿಗರ ಅತಿರೇಕಕ್ಕೆ ಆಕ್ರೋಶ!

ಸೆ.15ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭ​ಗೊ​ಳ್ಳ​ಲಿ​ರುವ ಟಿ20 ಸರ​ಣಿಯಲ್ಲಿ ಆಡಲು ಆಟ​ಗಾ​ರರು ತಂಡ ಕೂಡಿ​ಕೊ​ಳ್ಳ​ಲಿದ್ದು, ಮೊದಲ ಪಂದ್ಯ​ಕ್ಕಾಗಿ ಧರ್ಮ​ಶಾ​ಲಾಗೆ ಪ್ರಯಾಣ ಮಾಡುವ ಮೊದಲು ‘ಕೊಹ್ಲಿ ಸ್ಟ್ಯಾಂಡ್‌’ ಉದ್ಘಾ​ಟನೆ ಕಾರ್ಯ​ಕ್ರ​ಮ​ದಲ್ಲಿ ಭಾಗಿ​ಯಾ​ಗ​ಲಿ​ದ್ದಾರೆ.

ಇದನ್ನೂ ಓದಿ: ಫಿರೋಜ್ ಶಾ ಕೋಟ್ಲಾ ಮೈದಾನ ಇನ್ಮುಂದೆ ಅರುಣ್ ಜೇಟ್ಲಿ ಸ್ಟೇಡಿಯಂ..!

ಫಿರೋಜ್ ಷಾ ಕೋಟ್ಲಾ ಮೈದಾನವನ್ನು ಶೀಘ್ರದಲ್ಲೇ ಅರುಣ್ ಜೇಟ್ಲಿ ಕ್ರೀಡಾಂಗಣ ಎಂದು ಮರು ನಾಮಕರವಾಗಲಿದೆ. ಇತ್ತೀಚೆಗೆ ನಿಧನರಾದ ಕೇಂದ್ರ ಮಾಜಿ ಸಚಿವ, ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅರುಣ್ ಜೇಟ್ಲಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಕೋಟ್ಲಾ ಮೈದಾನವನ್ನು ಜೇಟ್ಲಿ ಮೈದಾನ ಎಂದು ಮರುನಾಮಕರ ಮಾಡಲು ನಿರ್ಧರಿಸಲಾಗಿದೆ.