ದೆಹಲಿ(ಜು.23): ಯುಸಿಐ ಜ್ಯೂನಿಯರ್ ಟ್ರಾಕ್ ಸೈಕ್ಲಿಂಗ್ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಗೆ ತೆರಳಲು ಸಜ್ಜಾಗಿದ್ದ 6 ಸದಸ್ಯರ ಭಾರತ ತಂಡಕ್ಕೆ ಸ್ವಿಟ್ಜಲೆಂಡ್ ರಾಯಭಾರಿ ಕಚೇರಿ ವೀಸಾ ನಿರಾಕರಿಸಿದೆ.

ಇದೇ ಆಗಸ್ಟ್ 15 ರಿಂದ 19ರ ವರೆಗೆ ಭಾರತ ತಂಡ ಸೈಕ್ಲಿಂಕ್‌ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಗಾಗಿ ಸ್ವೆಟ್ಜರ್‌ಲೆಂಡ್ ತೆರಳು ಸಜ್ಜಾಗಿದೆ. ಆದರೆ ವೀಸಾ ಸಮಸ್ಯೆ ಇದೀಗ ಭಾರತ ತಂಡಕ್ಕೆ ತೊಡಕಾಗಿಗಿ ಪರಿಣಮಿಸಿದೆ. ವೀಸಾ ನಿರಾಕರಣಗೆ ಸ್ವಿಟ್ಜರ್‌ಲೆಂಡ್ ರಾಯಭಾರಿ ಕಚೇರಿ ಹಲವು ಕಾರಣಗಳನ್ನ ನೀಡಿದೆ.

6 ಸದಸ್ಯರ ಕುರಿತು ಮಾಹಿತಿ ಹಾಗೂ ದಾಖಲೆಗಳು ಸಮರ್ಪಕವಾಗಿಲ್ಲ. ಪ್ರವಾಸದ ಉದ್ದೇಶ, ಉಳಿದುಕೊಳ್ಳುವ ಸ್ಥಳ, ಹಾಗೂ ಇತರ ಮಾಹಿತಿಗಳನ್ನ ಭಾರತ ನೀಡಿಲ್ಲ  ಎಂದು ಸ್ವಿಟ್ಜರ್‌ಲೆಂಡ್ ದೂತವಾಸ ಕಚೇರಿ ಹೇಳಿದೆ. 

ವೀಸಾ ನಿರಾಕರಣೆ ಬೆನ್ನಲ್ಲೇ, ಭಾರತೀಯ ಸೈಕ್ಲಿಂಕ್ ಫೆಡರೇಶನ್ ಹಾಗೂ ಏಷ್ಯಾ ಸೈಕ್ಲಿಂಗ್ ಸಮಿತಿ ಪತ್ರ ಬರೆದಿದೆ. ತಕ್ಷಣವೇ ಭಾರತೀಯ ಸೈಕ್ಲಿಂಗ್ ಪಟುಗಳಿಗೆ ವೀಸಾ ನೀಡುವಂತೆ ಮನವಿ ಮಾಡಿದೆ. ಇಷ್ಟೇ ಅಲ್ಲ ಪೂರಕ ದಾಖಲೆ ಹಾಗೂ ಮಾಹಿತಿ ನೀಡೋದಾಗಿ ಸ್ಪಷ್ಟಪಡಿಸಿದೆ.