ನವದೆಹಲಿ(ಅ.01): ಮುಂಬರುವ ಉದಯೋನ್ಮುಖ (ಎಮರ್ಜಿಂಗ್‌) ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡದ ನೇತೃತ್ವವನ್ನು ಕರ್ನಾಟಕದ ಬಿ.ಆರ್‌. ಶರತ್‌ ನಿರ್ವಹಿಸುತ್ತಿದ್ದಾರೆ. 14 ಆಟಗಾರರ ತಂಡವನ್ನು ಸೋಮವಾರ ಮುಂಬೈನಲ್ಲಿ ಪ್ರಕಟಿಸಲಾಗಿದೆ. ಭಾರತ ಕಿರಿಯರ ತಂಡದಲ್ಲಿ ಶರತ್‌ ಏಕೈಕ ಕನ್ನಡಿಗ ಎನಿಸಿದ್ದಾರೆ.

 ಇದನ್ನೂ ಓದಿ: ದುರಾಡಳಿತ ವಿರುದ್ಧ ಬ್ಯಾಟ್ ಬೀಸಿ! ರಾಜಕೀಯ ಆಯ್ತು, ಕ್ರಿಕೆಟ್‌ಗೂ ಚುನಾವಣೆ ಬಿಸಿ

ನವೆಂಬರ್‌ನಿಂದ ಟೂರ್ನಿ ಆರಂಭವಾಗಲಿದ್ದು, ಎಲ್ಲಾ ಪಂದ್ಯಗಳು ಬಾಂಗ್ಲಾದೇಶದಲ್ಲಿ ನಡೆಯಲಿವೆ. ಗಾಯದಿಂದ ಚೇತರಿಸಿಕೊಂಡು 19 ತಿಂಗಳು ಬಳಿಕ ಯುವ ವೇಗಿ ಕಮಲೇಶ್‌ ನಾಗರಕೋಟಿ ಭಾರತ ಕಿರಿಯರ ತಂಡಕ್ಕೆ ಮರಳಿದ್ದಾರೆ.

 ಇದನ್ನೂ ಓದಿ: ಏಷ್ಯಾಕಪ್ 2020: ಬಿಸಿಸಿಐಗೆ ಪಾಕ್‌ ಗಡು​ವು

ತಂಡ: ಶರತ್‌ ಬಿ.ಆರ್‌. (ನಾಯಕ), ವಿನಾಯಕ ಗುಪ್ತಾ, ಚಿನ್ಮಯ್‌ ಸುತಾರ್‌, ಯಶ್‌ ರಾಥೋಡ್‌, ಆರ್ಮನ್‌ ಜಾಫರ್‌, ಸನ್ವೀರ್‌ ಸಿಂಗ್‌, ಕಮಲೇಶ್‌, ಹೃತಿಕ್‌, ಎಸ್‌.ಎ. ದೇಸಾಯಿ, ಆಶ್‌ರ್‍ದೀಪ್‌ ಸಿಂಗ್‌, ಎಸ್‌.ಆರ್‌. ದುಬೆ, ಸೂರಜ್‌, ರೇಖಾಡೆ, ಕುಲ್ದೀಪ್‌ ಯಾದವ್‌.