ಬೆಂಗಳೂರು(ಸೆ.13): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಖಾಲಿ ಇರುವ 80 ಕೋಚ್‌ ಹಾಗೂ 20 ಸಹಾಯಕ ಸಿಬ್ಬಂದಿ ನೇಮಕಕ್ಕೆ, ಸೆ. 16 ಹಾಗೂ 17 ರಂದು ಕರ್ನಾಟಕ ಕ್ರೀಡಾ ಪ್ರಾಧಿಕಾರ ಮುಂದಾಗಿದೆ. ಈಗಾಗಲೇ ನಿಗದಿ ಪಡಿಸಿರುವ ಆಯ್ಕೆ ಪ್ರಕ್ರಿಯೆ ದಿನದಂದು ಸೂಕ್ತ ಅಭ್ಯರ್ಥಿಗಳ ದಾಖಲೆ ಪರಿಶೀಲನೆ, ದೈಹಿಕ ಪರೀಕ್ಷೆ ಹಾಗೂ ಸಂದರ್ಶನ ನಡೆಸಲಾಗುವುದು.

ಬೆಂಗಳೂರಿನಿಂದ ರಾಷ್ಟ್ರೀಯ ಅಥ್ಲೆಟಿಕ್ಸ್ ರಾಂಚಿಗೆ ಎತ್ತಂಗಡಿ..!

16 ರಂದು ಕೋಚ್‌ಗಳಿಗೆ ಹಾಗೂ 17 ರಂದು ಕಿರಿಯ ಕೋಚ್‌ಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಥ್ಲೆಟಿಕ್ಸ್‌, ಬಾಕ್ಸಿಂಗ್‌, ಬಾಸ್ಕೆಟ್‌ಬಾಲ್‌, ಫೆನ್ಸಿಂಗ್‌, ಸೈಕ್ಲಿಂಗ್‌, ಕುಸ್ತಿ, ವಾಲಿಬಾಲ್‌, ವೇಟ್‌ಲಿಫ್ಟಿಂಗ್‌, ಜುಡೋ, ಜಿಮ್ನಾಸ್ಟಿಕ್ಸ್‌, ಹಾಕಿ ಹಾಗೂ ತಾಂತ್ರಿಕ ಹುದ್ದೆಗೆ ನೇಮಕಾತಿ ನಡೆಯಲಿದೆ. ನ್ಯೂಟ್ರಿಶಿಯನಿಸ್ಟ್‌, ಪಿಸಿಯೊಥೆರಪಿಸ್ಟ್‌ ಹಾಗೂ ಫಿಟ್ನೆಸ್‌ ಟ್ರೈನರ್‌ಗಳನ್ನು ಹೊರತುಪಡಿಸಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಉಳಿದ ಎಲ್ಲಾ ಅಭ್ಯರ್ಥಿಗಳು ಸರ್ಕಾರಿ ವೈದ್ಯಾಧಿಕಾರಿಗಳಿಂದ ಪಡೆದ ದೈಹಿಕ ಸಾಮರ್ಥ್ಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು ಎಂದು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕರಾದ ಎಂ.ಎಸ್‌. ರಮೇಶ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆಗಿಟ್ಟಿಸಿದ ಜಿನ್ಸನ್ ಜಾನ್ಸನ್

ಈ ಹಿಂದೆ ಜುಲೈ 15 ಮತ್ತು 16 ರಂದು ನಡೆಯಬೇಕಿದ್ದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲಾಗಿತ್ತು. ಒಟ್ಟು 204 ಅರ್ಜಿಗಳು ಬಂದಿದ್ದು ಇದರಲ್ಲಿ 158 ಅರ್ಜಿಗಳನ್ನು ಪರಿಗಣಿಸಲಾಗಿದೆ. ತರಬೇತುದಾರರ ವಿಭಾಗದಲ್ಲಿ 67, ಕಿರಿಯ ತರಬೇತುದಾರರ ವಿಭಾಗದಲ್ಲಿ 59, ಫಿಟ್ನೆಸ್‌ ಟ್ರೈನರ್‌ ವಿಭಾಗದಲ್ಲಿ 27, ನ್ಯೂಟ್ರಿಶಿಯನಿಸ್ಟ್‌ 04, ಪಿಸಿಯೊಥೆರಪಿ 01 ಅಭ್ಯರ್ಥಿಗಳು ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.