ಸೋಮವಾರ ಪ್ರವಾಸಿ ಬ್ಯಾಟ್ಸ್'ಮನ್'ಗಳು ದಿಟ್ಟವಾಗಿ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಡ್ರಾ ಮಾಡಿಕೊಳ್ಳುವ ಇರಾದೆಯಲ್ಲಿದ್ದ ಕಿವೀಸ್ ಪಡೆಗೆ ಕರ್ಣ್ ಶರ್ಮಾ ಹಾಗೂ ಶಹಜಾದ್ ನದೀಮ್ ಮಾರಕವಾಗಿ ಪರಿಣಮಿಸಿದರು.

ವಿಜಯವಾಡ(ಅ.03): ಯುವ ಸ್ಪಿನ್ನರ್‌'ಗಳಾದ ಕರ್ಣ್ ಶರ್ಮಾ (78/5) ಮತ್ತು ಶಹಬಾಜ್ ನದೀಮ್ (41/4) ಅವರ ಮಾರಕ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ 'ಎ' ತಂಡ 4 ದಿನಗಳ ಟೆಸ್ಟ್ ಕ್ರಿಕೆಟ್'ನ ಎರಡನೇ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 21 ರನ್'ಗಳ ಸೋಲು ಕಂಡಿದೆ. ಈ ಮೂಲಕ ಈ ಮೂಲಕ ಸರಣಿಯನ್ನು ಭಾರತ 'ಎ' ತಂಡ 2-0 ಅಂತರದಲ್ಲಿ ಜಯಿಸಿದೆ. ಮೊದಲ ಪಂದ್ಯವನ್ನು ಭಾರತ 'ಎ' ತಂಡ ಗೆದ್ದುಕೊಂಡಿತ್ತು.

ನಾಲ್ಕನೇ ಮತ್ತು ಕೊನೆಯ ದಿನವಾದ ಇಂದು 1 ವಿಕೆಟ್‌'ಗೆ 104 ರನ್‌'ಗಳಿಂದ ದ್ವಿತೀಯ ಇನ್ನಿಂಗ್ಸ್ ಮುಂದುವರಿಸಿದ ನ್ಯೂಜಿಲೆಂಡ್ ‘ಎ’ ತಂಡ 210 ರನ್‌ ಸರ್ವಪತನ ಕಂಡಿತು. ಸೋಮವಾರ ಪ್ರವಾಸಿ ಬ್ಯಾಟ್ಸ್'ಮನ್'ಗಳು ದಿಟ್ಟವಾಗಿ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಡ್ರಾ ಮಾಡಿಕೊಳ್ಳುವ ಇರಾದೆಯಲ್ಲಿದ್ದ ಕಿವೀಸ್ ಪಡೆಗೆ ಕರ್ಣ್ ಶರ್ಮಾ ಹಾಗೂ ಶಹಜಾದ್ ನದೀಮ್ ಮಾರಕವಾಗಿ ಪರಿಣಮಿಸಿದರು. ಇಂದಿನ ಉಳಿದ 9 ವಿಕೆಟ್‌'ಗಳಿಂದ ನ್ಯೂಜಿಲೆಂಡ್ ತಂಡ 106 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ನ್ಯೂಜಿಲೆಂಡ್ ಆಡಿದ 2 ಟೆಸ್ಟ್ ಪಂದ್ಯಗಳಲ್ಲೂ ಸೋಲು ಕಂಡಿತು.

ಸಂಕ್ಷಿಪ್ತ ಸ್ಕೋರ್

ನ್ಯೂಜಿಲೆಂಡ್ ‘ಎ’: 211/10 ಮತ್ತು 210/10

(ನಿಕೋಲಸ್ 94, ರೇವಲ್ 47: ಕರ್ಣ್ 78/5)

ಭಾರತ ‘ಎ’ 447

(ಅಂಕಿತ್ 162, ಶ್ರೇಯಸ್ 82: ಸೋದಿ 120/3)