ದಕ್ಷಿಣ ಭಾರತದ ಚಿತ್ರಗಳಲ್ಲಿ ಹೆಚ್ಚ ಜನಪ್ರಿಯಾವಾಗಿರುವ ನಟಿ ಕಾಜಲ್ ಅಗರ್ವಾಲ್ ಇದೀಗ ತಮ್ಮ ನೆಚ್ಚಿನ ಕ್ರಿಕೆಟಿಗರ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಆಸ್ಕ್ ಅಗರ್ವಾಲ್‌ನಲ್ಲಿ ಕಾಜಲ್ ಕ್ರಿಕೆಟಿಗರ ಹೆಸರನ್ನು ಹೇಳಿದ್ದಾರೆ.

ಮುಂಬೈ(ಸೆ.20): ಟೀಂ ಇಂಡಿಯಾ ಪ್ರತಿನಿಧಿಸಿರುವ ಎಲ್ಲಾ ಕ್ರಿಕೆಟಿಗರು ಸ್ಟಾರ್ ಕ್ರಿಕೆಟಿಗರು. ಇದರಲ್ಲಿ ಹಲವರು ಸೂಪರ್ ಸ್ಟಾರ್‌ಗಳಾಗಿದ್ದಾರೆ. ಇವರಿಗೆ ದೇಶ-ವಿದೇಶಗಳಲ್ಲಿ ಫ್ಯಾನ್ಸ್‌ ಇದ್ದಾರೆ. ಬಾಲಿವುಡ್ ಹಾಗೂ ಇತರ ಸಿನಿ ರಂಗದಲ್ಲೂ ಟೀಂ ಇಂಡಿಯಾ ಕ್ರಿಕೆಟಿಗರಿಗರ ಅಭಿಮಾನಿಗಳಿದ್ದಾರೆ. ಇದೀಗ್ ಬಾಲಿವುಡ್ ನಟಿ ಕಾಜಲ್ ಅಗರ್ವಾಲ್ ನೆಚ್ಚಿನ ಇಬ್ಬರು ಕ್ರಿಕೆಟಿಗರ ಹೆಸರನ್ನು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: #INDvSA 2ನೇ ಟಿ20: ರೋಹಿತ್ ದಾಖಲೆ ಮುರಿದ ಕೊಹ್ಲಿ!

ಸಾಮಾಜಿಕ ಜಾಲತಾಣದಲ್ಲಿ ಆಸ್ಕರ್ ಅಗರ್ವಾಲ್ ಅನ್ನೋ ಅಭಿಯಾನದಲ್ಲಿ ಕಾಜಲ್ ಅಗರ್ವಾಲ್‌ಗೆ ಅಭಿಮಾನಿಯೋರ್ವ ನೆಚ್ಚಿನ ಕ್ರಿಕೆಟಿಗ ಯಾರು ಎಂದು ಪ್ರಶ್ನೆ ಕೇಳಿದ್ದ. ಇದಕ್ಕೆ ಉತ್ತರಿಸಿದ ಅಗರ್ವಾಲ್, ಎಂ.ಎಸ್.ಧೋನಿ ಹಾಗೂ ವಿರಾಟ್ ಕೊಹ್ಲಿ ಎಂದು ಉತ್ತರಿಸಿದ್ದಾರೆ.

Scroll to load tweet…

ಇದನ್ನೂ ಓದಿ: ಧೋನಿ IPL ಭವಿಷ್ಯ; CSK ಮಾಲೀಕ ಬಿಚ್ಚಿಟ್ಟ ಸೀಕ್ರೆಟ್!

ಕಾಜಲ್ ಅಗರ್ವಾಲ್ ಉತ್ತರ ಇದೀಗ ರೋಹಿತ್ ಅಭಿಮಾನಿಗಳನ್ನು ಕೆರಳಿಸಿದೆ. ದಾಖಲೆಯ ದ್ವಿಶತಕ ಹಾಗೂ ಸ್ಫೋಟಕ ಬ್ಯಾಟಿಂಗ್ ಮೂಲಕ ಇತಿಹಾಸ ರಚಿಸಿರುವ ರೋಹಿತ್‌ ಹೆಸರು ಹೇಳದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಇಬ್ಬರು ಹೆಸರು ಹೇಳುವಾಗ ರೋಹಿತ್ ಹೆಸರು ಸೇರಿಸಬಹುದಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.